Tuesday, December 23, 2025

ಸಿಂಪಲ್ ಅಂಡ್ ಟೇಸ್ಟಿ ಬ್ರೇಕ್ ಫಾಸ್ಟ್ ಜೀರಾ ರೈಸ್! ಮಾಡೋದು ತುಂಬಾ ಸುಲಭ

ಸಿಂಪಲ್ ಅಂಡ್ ಟೇಸ್ಟಿ ಬ್ರೇಕ್ ಫಾಸ್ಟ್ ಜೀರಾ ರೈಸ್! ಮಾಡೋದು ತುಂಬಾ ಸುಲಭ

ಅಡುಗೆ ಮನೆಯ ತಕ್ಷಣ ಬ್ರೇಕ್ ಫಾಸ್ಟ್ ಬೇಕಂದ್ರೆ ಜೀರಾ ರೈಸ್ ಮಾಡ್ಕೊಳ್ಳಿ. ಬಾಸ್ಮತಿ ಅಕ್ಕಿಯಿಂದ ತಯಾರಿಸಲಾಗುವ ಈ ಸಾದಾ ಆದರೆ ಅತ್ಯುತ್ತಮ ರುಚಿಯ ಈ ಉಪಹಾರವನ್ನು ಮೊಸರು ಬಜ್ಜಿ ಜೊತೆಗೂ ಸವಿಯಬಹುದು ಅಥವಾ ಹಾಗೇನೂ ತಿನ್ನಬಹುದು.

ಬೇಕಾಗುವ ಪದಾರ್ಥಗಳು:

1/2 ಕಪ್ ಬಾಸ್ಮತಿ ಅಕ್ಕಿ
1 ಚಮಚ ತುಪ್ಪ ಅಥವಾ ಎಣ್ಣೆ
2 ಟೀ ಚಮಚ ಜೀರಿಗೆ
1 ಸಣ್ಣ ಈರುಳ್ಳಿ
8-10 ಗೋಡಂಬಿ
1¼ ಕಪ್ ಬಿಸಿ ನೀರು
ಉಪ್ಪು

ಮಾಡುವ ವಿಧಾನ:

ಮೊದಲು 1 ಕಪ್ ಬಾಸ್ಮತಿ ಅಕ್ಕಿಯನ್ನು 15-20 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಬಸಿದುಕೊಳ್ಳಿ.

ಒಂದು ದಪ್ಪ ತಳದ ಬಾಣಲೆಗೆ 1½ ಟೀ ಚಮಚ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಈಗ 6-7 ಗೋಡಂಬಿಗಳನ್ನು ಹಾಕಿ ಕಂಡು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಹುರಿದ ಮೇಲೆ ಗೋಡಂಬಿಗಳನ್ನು ಬೇರೆ ತಟ್ಟೆಗೆ ತೆಗೆದು ಇಡಿ.

ಅದೇ ಬಾಣಲೆಗೆ ½ ಟೀ ಚಮಚ ಜೀರಿಗೆ ಹಾಕಿ ಸಿಡಿದ ನಂತರ, 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಈರುಳ್ಳಿಯು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಈ ಈರುಳ್ಳಿಗೆ ತೊಳೆದ ಬಾಸ್ಮತಿ ಅಕ್ಕಿ ಸೇರಿಸಿ. 2-3 ನಿಮಿಷಗಳ ಕಾಲ ಮಿಶ್ರಣವನ್ನು ನಿಧಾನವಾಗಿ ಹುರಿಯಿರಿ.

ಈಗ 1¼ ಕಪ್ ಬಿಸಿ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಕುದಿಸಿರಿ. ನಂತರ ಮುಚ್ಚಳವಿಟ್ಟು ಉರಿಯನ್ನು ಕಡಿಮೆ ಮಾಡಿ 8-10 ನಿಮಿಷಗಳ ಕಾಲ ಅನ್ನವನ್ನು ಬೇಯಿಸಿ.

ಅನ್ನ ಸಂಪೂರ್ಣವಾಗಿ ಬೆಂದ ಬಳಿಕ ಉರಿಯನ್ನು ಆಫ್ ಮಾಡಿ, 8-10 ನಿಮಿಷಗಳ ಕಾಲ ಹಾಗೆಯೇ ಮುಚ್ಚಿ ಇಡಿ. ನಂತರ ಮುಚ್ಚಳ ತೆರೆದು ಅನ್ನವನ್ನು ಲೈಟಾಗಿ ಮಿಶ್ರಣ ಮಾಡಿ. ಕೊನೆಗೆ ಹುರಿದ ಗೋಡಂಬಿಗಳನ್ನು ಸೇರಿಸಿದರೆ ಜೀರಾ ರೈಸ್ ರೆಡಿ.

error: Content is protected !!