Thursday, September 4, 2025

ಸಿನಿಮಾ ರಿಲೀಸ್‌ಗೆ ನಾಲ್ಕು ದಿನ ಮುನ್ನವೇ ಪ್ರೀಮಿಯರ್‌ ಶೋ! ಕಾರಣ ನೀಡಿದ ರಾಜ್‌ ಬಿ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಾಜ್‌ ಬಿ ಶೆಟ್ಟಿ ನಿರ್ದೇಶನದ ಹಾರರ್‌ ಕಾಮಿಡಿ ಸಿನಿಮಾ ಸು ಫ್ರಮ್‌ ಸೋ ಇನ್ನೆರಡು ದಿನದಲ್ಲಿ ರಿಲೀಸ್‌ ಆಗಲಿದೆ. ರಿಲೀಸ್‌ಗೂ ನಾಲ್ಕು ದಿನ ಮುನ್ನವೇ ರಾಜ್‌ ತಮ್ಮ ಸಿನಿಮಾ ಪ್ರೀಮಿಯರ್‌ ಶೋ ಹೋಸ್ಟ್‌ ಮಾಡಿದ್ದರು. ಇದಕ್ಕೆ ಕಾರಣವನ್ನು ನಟ ನೀಡಿದ್ದಾರೆ.

ನಮ್ಮ ಸಿನಿಮಾ ಹೀಗೆದೆ, ಹಾಗಿದೆ ನೋಡಿ ಎಂದೆಲ್ಲಾ ಕುಳಿತುಕೊಂಡು ಸಂದರ್ಶನದಲ್ಲಿ ಹೇಳೋದು ನನಗೆ ಇಷ್ಟ ಇಲ್ಲ. ನಾಲ್ಕು ದಿನ ಮುನ್ನವೇ ಪ್ರೀಮಿಯರ್‌ ಶೋ ನಡೆದಿದೆ. ಜನ ಸಿನಿಮಾ ಇಷ್ಟಪಟ್ಟಿದ್ದಾರೆ. ನೂರಾರು ಜನಕ್ಕೆ ಹೇಳುತ್ತಾರೆ. ಅಲ್ಲೇ ಪ್ರಮೋಷನ್‌ ಆಯ್ತಲಾ? ಸಿನಿಮಾ ಗೆಲ್ಲತ್ತೆ ಇಲ್ಲ ಸೋಲತ್ತೆ ಅಷ್ಟೆ ಇದನ್ನು ಬಿಟ್ಟು ಇನ್ನೇನು ಆಗೋಕೆ ಸಾಧ್ಯ ಎಂದು ರಾಜ್‌ ಹೇಳಿದ್ದಾರೆ.

‘ಜನರಿಗೆ ಸಿನಿಮಾ ತೋರಿಸಿದರೆ ಸಿನಿಮಾ ಕೆಟ್ಟದಾಗಿದೆ ಅಥವಾ ಸಿನಿಮಾ ಚೆನ್ನಾಗಿದೆ ಎಂಬ ಎರಡೇ ಉತ್ತರ ಬರಲು ಸಾಧ್ಯ. ಸಿನಿಮಾನ ಜನರಿಗೆ ತೋರಿಸಿ ಅವರೇ ಉತ್ತರ ಕೊಡಬೇಕು. ಅವರು ಚೆನ್ನಾಗಿದೆ ಎಂದರೆ ಅದೇ ಪ್ರಮೋಷನ್. ಅದು ರಿಸ್ಕ್ ಎಂದು ಬೇರೆಯವರಿಗೆ ಅನಿಸಬಹುದು. ನನಗೆ ಹಾಗೆ ಅನಿಸಲ್ಲ’ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.

ಇದನ್ನೂ ಓದಿ