January19, 2026
Monday, January 19, 2026
spot_img

ಸೈಲೆಂಟ್‌ ಆಗಿಯೇ ಎಂಗೇಜ್‌ ಆದ ಅರ್ಜುನ್‌ ತೆಂಡೂಲ್ಕರ್‌, ಹುಡುಗಿ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಚಿನ್‌ ತೆಂಡೂಲ್ಕರ್‌  ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ಕಾರ್ಯಕ್ರಮ ಖಾಸಗಿಯಾಗಿ ನಡೆದಿದೆ. ಎರಡೂ ಕಡೆಯ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು.

ರವಿ ಘಾಯ್ ಕುಟುಂಬವು ಆತಿಥ್ಯ ಮತ್ತು ಆಹಾರ ಉದ್ಯಮಗಳಲ್ಲಿ ಹೆಸರು ಪಡೆದಿದೆ. ಇಂಟರ್ ಕಾಂಟಿನೆಂಟಲ್ ಹೋಟೆಲ್ ಮತ್ತು ಜನಪ್ರಿಯ ಐಸ್‌ ಕ್ರೀಂ ಬ್ರ್ಯಾಂಡ್‌ ಬ್ರೂಕ್ಲಿನ್ ಕ್ರೀಮರಿಗಳನ್ನು ಕುಟುಂಬ ಹೊಂದಿದೆ.

ಅಧಿಕೃತ ಭಾರತೀಯ ಸರ್ಕಾರಿ ದಾಖಲೆಗಳ ಪ್ರಕಾರ (ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ), ಸಾನಿಯಾ ಚಾಂದೋಕ್ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ LLP ಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕಿಯಾಗಿದ್ದಾರೆ.

25 ವರ್ಷದ ಅರ್ಜುನ್ ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವೂ ಆಡಿದ್ದಾರೆ.

Must Read