ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ಉಗ್ರ ದಾಳಿ ನಂತರ, ಭಾರತವು ಪಾಕಿಸ್ತಾನ ಮತ್ತು ಅಲ್ಲಿ ಪೋಷಿಸಲ್ಪಟ್ಟ ಭಯೋತ್ಪಾದಕರಿಗೆ ಆಪರೇಷನ್ ಸಿಂದೂರ್ ಮೂಲಕ ತಕ್ಕ ಉತ್ತರ ಕೊಟ್ಟಿದೆ.
ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಭಾರತೀಯ ಸೇನೆ ಬಳಿ ಬೇಡಿಕೊಂಡಿತ್ತು. ಇದರಂತೆ ಕದನ ವಿರಾಮ ಘೋಷಣೆಯಾಗಿತ್ತು. ಹೀಗೆ ಪಾಕಿಸ್ತಾನ ಕದನ ವಿರಾಮ ಅಂಗಲಾಚಲು ಕಾರಣವೇನು ಅನ್ನೋದರ ಆಪರೇಶನ್ ಸಿಂದೂರ್ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಭಾರತೀಯ ಸೇನೆಯ ನಾರ್ದನ್ ಕಮಾಂಡ್, ಆಪರೇಶನ್ ಸಿಂದೂರ್ ವಿಡಿಯೋ ಬಿಡುಗಡೆ ಮಾಡಿದೆ. ಪಹಲ್ಗಾಮ್ ಉಗ್ರ ದಾಳಿಯಿಂದ ಹಿಡಿದು ಆಪರೇಶನ್ ಸಿಂದೂರ್, ಪಾಕಿಸ್ತಾನ ಪ್ರತಿದಾಳಿಯ ಯತ್ನಗಳು ಹಾಗೂ ಭಾರತ, ಪಾಕಿಸ್ತಾನಕ್ಕೆ ನುಗ್ಗಿ ನಡೆಸಿದ ದಾಳಿಯ ದೃಶ್ಯಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಉಗ್ರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನ ಯತ್ನಗಳನ್ನು ವಿಫಲಗೊಳಿಸಿ ಭಾರತದ ದಾಳಿ ಹಾಗೂ ಕದನ ವಿರಾಮದ ಸಂದರ್ಭ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿದೆ.
https://x.com/NorthernComd_IA/status/1963183906259107972?ref_src=twsrc%5Etfw%7Ctwcamp%5Etweetembed%7Ctwterm%5E1963183906259107972%7Ctwgr%5Ed01d7dc2355c57b37e1743fc8a511660b7c9aba8%7Ctwcon%5Es1_&ref_url=https%3A%2F%2Fwww.news18.com%2Findia%2Fmeticulous-planning-precise-strikes-indian-army-releases-new-op-sindoor-video-watch-ws-l-9546922.html
ಭಾರತೀಯ ಸೇನೆ ಬಿಡುಗಡೆ ಮಾಡಿದ ವಿಡಿಯೋ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯ ಸುಂದರ ತಾಣದಿಂದ ಆರಂಭಗೊಳ್ಳುತ್ತದೆ. ಎಪ್ರಿಲ್ 22ರಂದು ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಕುರಿತು ಕೆಲ ವಿಡಿಯೋ ತುಣುಕುಗಳನ್ನು ಭಾರತೀಯ ಸೇನೆ ಬಳಸಿಕೊಂಡಿದೆ. ದಾಳಿ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕರೆದ ಉನ್ನತ ಮಟ್ಟದ ಸಭೆ, ಬಳಿಕ ನಡೆದ ಪ್ಲಾನಿಂಗ್ ಸೇರಿದಂತೆ ಎಲ್ಲಾ ವಿಡಿಯೋಗಳನ್ನು ಭಾರತೀಯ ಸೇನೆ ಬಳಸಿಕೊಂಡಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಮೂರು ಸೇನೆಯಯ ಸಮನ್ವಯದಲ್ಲಿ ಪ್ಲಾನಿಂಗ್ ನಡೆಸಲಾಗಿತ್ತು. ಬಳಿಕ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಮೂಲಕ ಭಾರತ, ಪಾಕಿಸ್ತಾನ ಗಡಿ ದಾಡಿ ಹೊಡೆದಿತ್ತು. 9 ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು. ಈ ಕುರಿತು ಸಂಪೂರ್ಣ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಇದೇ ವೇಳೆ ಪಾಕಿಸ್ತಾನ ಪ್ರತಿದಾಳಿಗೆ ಯತ್ನಿಸಿದೆ. ಆರಂಭದಲ್ಲಿ ಭಾರತದ ನಾಗರೀಕರ ಟಾರ್ಗೆಟ್ ಮಾಡಿ ದಾಳಿ ಮಾಡಿತ್ತು. ಇದು ಭಾರತವನ್ನು ಮತ್ತಷ್ಟು ಕೆರಳಿಸಿತ್ತು. ಆಪರೇಶನ್ ಸಿಂದೂರ್ ತೀವ್ರಗೊಂಡಿತ್ತು. ಅಘೋಷಿತ ಯುದ್ಧವೇ ಆರಂಭಗೊಂಡಿತ್ತು. ಪಾಕಿಸ್ತಾನದ ಸೇನಾ ನೆಲೆ ಟಾರ್ಗೆಟ್ ಮಾಡಿ ಸತತ ದಾಳಿ ಮಾಡಿತ್ತು. ಭಾರತದ ಕ್ಷಿಪಣಿ ದಾಳಿ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿತ್ತು. ಕರಾಚಿ ಮೇಲೂ ಭಾರತ ದಾಳಿ ನಡೆಸಿತ್ತು. ಈ ದಾಳಿ ಪಾಕಿಸ್ತಾನವನ್ನು ಕದನವಿರಾಮಕ್ಕೆ ಅಂಗಲಾಚುವಂತೆ ಮಾಡಿತ್ತು. ಈ ಎಲ್ಲಾ ಕ್ಷಣಗಳ ಸಂಪೂರ್ಣ ವಿಡಿಯೋದಲ್ಲಿ ಸೇರಿವೆ.