ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧದ ನಡುವೆಯೂ ಬಂಗಾರಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ವಾರ್ ಎಫೆಕ್ಟ್‌ನಿಂದ ಗಗನಕ್ಕೇರಿದ ಚಿನ್ನ ಈಗ ಪಾತಾಳಕ್ಕೆ ಕುಸಿದಿದೆ. ಚಿನ್ನದ ದರ ಕುಸಿತವು ಹೆಂಗಳೆಯರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. 10 ಗ್ರಾಂ ಗೆ ಯುದ್ಧದ ಪರಿಣಾಮದಿಂದ 30 ಸಾವಿರ ರೂ. ವರೆಗೆ ಇದ್ದ 24 ಕ್ಯಾರೆಟ್ ಚಿನ್ನದ ದರ ಕೊಂಚ ಇಳಿಕೆ ಕಂಡಿದ್ದರೆ, 22 ಕ್ಯಾರೆಟ್ ಚಿನ್ನವೂ 25 ಸಾವಿರದಷ್ಟು ಇಳಿಕೆಯಾಗಿದೆ.
22 ಕ್ಯಾರೆಟ್ ಚಿನ್ನ 10 ಗ್ರಾಂಗೆ ಇಂದು 2,700 ರೂ ಇಳಿಕೆ, 1 ಗ್ರಾಂ ಗೆ 270 ರೂ. ಇಳಿಕೆ
24 ಕ್ಯಾರೆಟ್ ಚಿನ್ನದ ದರ 1,40,0350 ರೂ.ಗೆ ಬಂದಿದೆ.
24 ಕ್ಯಾರೆಟ್ 10 ಗ್ರಾಂಗೆ 2,940 ರೂ. ಇಳಿಕೆ, 1 ಗ್ರಾಂಗೆ 294 ರೂ ಇಳಿಕೆ.
22 ಕ್ಯಾರೆಟ್ ಚಿನ್ನದ ದರ 1,28,650 ರೂ



