Wednesday, November 5, 2025

ವಂದೇ ಮಾತರಂ ಗೀತೆಗೆ 150ರ ಸಂಭ್ರಮ: ದೇಶದ ವಿವಿಧ ಭಾಗಗಳಲ್ಲಿ ನವೆಂಬರ್ 7ರಿಂದ ವಾರಪೂರ್ತಿ ಕಾರ್ಯಕ್ರಮ

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ವಂದೇ ಮಾತರಂ’ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಇದೇ 7 ರಿಂದ 14 ರವರೆಗೆ ವಾರಪೂರ್ತಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ವಕ್ತಾರ ತರುಣ ಚುಘ್‌ ದೆಹಲಿಯಲ್ಲಿಂದು ಹೇಳಿದ್ದಾರೆ.

1875ರಲ್ಲಿ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ಫೂರ್ತಿಯ ಸೆಲೆಯಾಗಿತ್ತು. ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ ಇದಾಗಿದೆ. ಕೇಂದ್ರ ಸಚಿವ ಸಂಪುಟ ಈ 150ನೇ ವಾರ್ಷಿಕೋತ್ಸವವನ್ನು ದೇಶಾದ್ಯಂತ ಆಚರಿಸಲು ಅನುಮೋದಿಸಿದೆ ಎಂದು ಹೇಳಿದರು. 1950ರಲ್ಲಿ, ಭಾರತ ಸರ್ಕಾರ “ವಂದೇ ಮಾತರಂ” ಗೀತೆಯನ್ನು ರಾಷ್ಟ್ರೀಯ ಗೀತೆಯಾಗಿ ಸ್ವೀಕರಿಸಿತು.

ಇದರ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೆಲವರನ್ನು ಓಲೈಸುವ ಸಲುವಾಗಿ ಗೀತೆಯನ್ನು ತುಂಡರಿಸಿದ ಘಟನೆಗಳೂ ನಡೆದಿವೆ. ಆದರೆ ಬಿಜೆಪಿ ಸರ್ಕಾರ ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಗೀತೆಯನ್ನು ಭಕ್ತಿಯ ಪ್ರತೀಕ ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ದೇಶದ ವಿವಿಧೆಡೆಗಳಲ್ಲಿ ಇದರ ಆಚರಣೆ ನಡೆಸುವಂತೆ ಕರೆಕೊಟ್ಟಿದ್ದಾರೆ ಎಂದು ಹೇಳಿದರು.

error: Content is protected !!