Tuesday, September 9, 2025

2 ಐಷಾರಾಮಿ ಕಾರಿಗೆ ಬರೋಬ್ಬರಿ 38 ಲಕ್ಷ ತೆರಿಗೆ ಕಟ್ಟಿದ ಕೆಜಿಎಫ್ ಬಾಬು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳಿಗೆ ಉದ್ಯಮಿ ಕೆಜಿಎಫ್‌ ಬಾಬು ಬರೋಬ್ಬರಿ 38 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ.

ಆಮೀರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್‌ ರಾಯ್ಸ್‌ ಕಾರಿಗೆ  19.73 ಲಕ್ಷ ರೂ. ಹಾಗೂ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ್ದ ಮತ್ತೊಂದು ರೋಲ್ಸ್‌ ರಾಯ್ಸ್‌ ಕಾರಿಗೆ 18.53 ಲಕ್ಷ ರೂ. ಟ್ಯಾಕ್ಸ್‌ ಪಾವತಿ ಮಾಡಿದ್ದಾರೆ. ತೆರಿಗೆ ವಸೂಲಿ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.

ಬೆಂಗಳೂರಿನ ವಸಂತನಗರದಲ್ಲಿರುವ ಉದ್ಯಮಿ ಕೆಜಿಎಫ್ ಬಾಬು ಅವರ ಮನೆ ಮೇಲೆ ಆರ್‌ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಬಾಬು ಅವರು ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳನ್ನು ಸೀಜ್ ಮಾಡಲು ಮುಂದಾಗಿತ್ತು.

ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಆರ್‌ಟಿಓ ತಂಡ ಕಾರು ಜಪ್ತಿಗೆ ಮುಂದಾಗಿತ್ತು. ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದರು. ಆದ್ರೆ ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಆರ್‌ಟಿಓ ತಂಡವು ಮನೆಯ ಹೊರಗಡೆಯೇ ಕಾದು ನಿಂತಿದ್ದರು. ಅಧಿಕಾರಿಗಳ ಮನವರಿಕೆ ಬಳಿಕ ಟ್ಯಾಕ್ಸ್‌ ಪಾವತಿ ಮಾಡಿದ್ದಾರೆ.

ಇದನ್ನೂ ಓದಿ