Tuesday, November 25, 2025

ತಿರುಪತಿಯಲ್ಲಿ 5 ವರ್ಷದ ಅವಧಿಯಲ್ಲಿ 20 ಕೋಟಿ ಲಡ್ಡು ಕಲಬೆರಕೆ: ತನಿಖೆಯಿಂದ ಶಾಕಿಂಗ್ ವಿಚಾರ ಬಹಿರಂಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. 2019-24ರ ಅವಧಿಯಲ್ಲಿ 20 ಕೋಟಿ ಲಡ್ಡು ಕಲಬೆರಿಕೆ ಆಗಿರೋದುಎಸ್‌ಐಟಿ ವಿಶೇಷ ತಂಡದ ತನಿಖೆಯಲ್ಲಿ ಬಯಲಾಗಿದೆ.

ತಿರುಪತಿ ದೇಗುಲಕ್ಕೆ ಪೂರೈಸಿದ್ದ ತುಪ್ಪವನ್ನು ಹಾಲಿನ ಉತ್ಪನ್ನ ಬಳಸದೇ ಪಾಮ್ ಆಯಿಲ್, ಕೃತಕ ಬಣ್ಣ, ಕೆಮಿಕಲ್ ಬಳಸಿ ತಯಾರಿಸಿದ್ದು ಸಾಬೀತಾಗಿದೆ.

2019-2024ರ ಅವಧಿಯಲ್ಲಿ ವಿತರಿಸಲಾದ ಒಟ್ಟು 48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದು ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.

ಕಳೆದ ವರ್ಷ ಈ ಕಲಬೆರಕೆ ತುಪ್ಪ ತಯಾರಿಸಿ ಲಡ್ಡು ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಈಗ ಕೇಂದ್ರ ತನಿಖಾ ದಳದ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಸುಮಾರು 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು – ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳೊಂದಿಗೆ ಬೆರೆಸಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಪೂರೈಸಿವೆ ಎಂದನ್ನು ಪತ್ತೆ ಮಾಡಲಾಗಿದೆ.

ಈ ಐದು ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಸಾದವನ್ನು ಪ್ರತ್ಯೇಕವಾಗಿ ಲೇಬಲ್ ಮಾಡದ ಕಾರಣ, ಯಾವ ಭಕ್ತರು ಕಲಬೆರಕೆ ಲಡ್ಡುಗಳನ್ನು ಸ್ವೀಕರಿಸಿದ್ದಾರೆಂದು ತಿಳಿಯಲು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!