Tuesday, January 13, 2026
Tuesday, January 13, 2026
spot_img

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು? ಹಿಂಸಾಚಾರದ ಹಿಂದೆ ಉಗ್ರರ ಕೈವಾಡ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಸೇರಿದಂತೆ ಸುಮಾರು 2000 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಅಮೆರಿಕ ಮತ್ತು ಯುರೋಪ್, ಇರಾನ್ ಮೇಲೆ ಮತ್ತೆ ಹೇರಿದ ನಿರ್ಬಂಧಗಳ ನಡುವೆ ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟದ ವಿರುದ್ಧ ಆರಂಭವಾದ ಹಿಂಸಾತ್ಮಕ ಪ್ರತಿಭಟನೆಗಳು ದೇಶಾದ್ಯಂತ ವ್ಯಾಪಿಸಿದ್ದು, ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.

ರಾಯಿಟರ್ಸ್ ಪ್ರಕಾರ, ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸಾವಿನ ಹಿಂದೆ “ಭಯೋತ್ಪಾದಕರು” ಇದ್ದಾರೆ ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಆದರೆ ಆ ಉಗ್ರರು ಯಾರು ಎಂಬುದರ ವಿವರವನ್ನು ನೀಡಿಲ್ಲ.

ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ನೇರ ಗುಂಡು ಹಾರಿಸಿದೆ ಮತ್ತು ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿರುವುದರೊಂದಿಗೆ ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವುದು ಕಷ್ಟಕರವಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.

ಆದಾಗ್ಯೂ, ಇರಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ನಿರ್ಬಂಧಿಸಲಾಗಿದ್ದ ಅಂತಾರಾಷ್ಟ್ರೀಯ ಫೋನ್ ಕರೆಗಳು ಪುನರಾರಂಭಗೊಂಡಿವೆ. ಆದರೆ ಹೊರಹೋಗುವ ಕರೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ನಾರ್ವೆ ಮೂಲದ ಎನ್‌ಜಿಒ ಇರಾನ್ ಹ್ಯೂಮನ್ ರೈಟ್ಸ್ (ಐಎಚ್‌ಆರ್), ಪ್ರತಿಭಟನೆಯ ಸಮಯದಲ್ಲಿ ಒಂಬತ್ತು ಅಪ್ರಾಪ್ತ ವಯಸ್ಕರು ಸೇರಿದಂತೆ 648 ಜನ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಆದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಕೆಲವು ಅಂದಾಜಿನ ಪ್ರಕಾರ, 6,000 ಕ್ಕಿಂತ ಹೆಚ್ಚು ಎಂದು ಹೇಳಿದೆ.

ಇರಾನ್ ನ 31 ಪ್ರಾಂತ್ಯಗಳಲ್ಲಿ 600 ಹೆಚ್ಚು ಪ್ರತಿಭಟನೆಗಳು ನಡೆದಿವೆ ಮತ್ತು ಇದುವರೆಗೆ ಸುಮಾರು 10,000 ಜನರನ್ನು ಬಂಧಿಸಲಾಗಿದೆ ಎಂದು ಎಂದು ಐಎಚ್‌ಆರ್ ಹೇಳಿದೆ.

Most Read

error: Content is protected !!