ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕ್ಸಲ್ ಶರಣಾಗತಿಯಲ್ಲಿ ಅಕ್ಟೋಬರ್ 17 ಒಂದು ಐತಿಹಾಸಿಕ ದಿನವಾಗಿದೆ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್‌ನಲ್ಲಿ ಒಂದೇ ದಿನ 200ಕ್ಕೂ ಹೆಚ್ಚು ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ.
ಜಗದಲ್ಪುರದ ಪೊಲೀಸ್ ಲೈನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 208 ಮಾವೋಗಳು ಮುಖ್ಯವಾಹಿನಿಗೆ ಬರುವುದಾಗಿ ಇಚ್ಛೆ ವ್ಯಕ್ತಪಡಿಸಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿದ್ದಾರೆ.
ಕೇಂದ್ರ ಸಮಿತಿ ಸದಸ್ಯ ವಾಸುದೇವ್ ರಾವ್ ಅಲಿಯಾಸ್ ಸತೀಶ್ ಅಲಿಯಾಸ್ ರೂಪೇಶ್ ಅಲಿಯಾಸ್ ವಿಕಲ್ಪ್, ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯರಾದ ರಾಣಿತಾ ಮತ್ತು ಸಂತು ಶರಣಾದ ಪ್ರಮುಖ ನಾಯಕರಾಗಿದ್ದಾರೆ. ಇವರ ಜೊತೆಗೆ 20 ಕ್ಕೂ ಹೆಚ್ಚು ವಿಭಾಗೀಯ ಸಮಿತಿ ಸದಸ್ಯರು, 30ಕ್ಕೂ ಹೆಚ್ಚು ಪ್ರದೇಶ ಸಮಿತಿ ಸದಸ್ಯರು ಮತ್ತು ಇತರ ಕೇಡರ್ನ ಮಾವೋವಾದಿಗಳು ಸಹ ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ.
ಈ ಮೂಲಕ ಉತ್ತರ ಬಸ್ತರ್‌ನಲ್ಲಿ ಮಾವೋವಾದಿಗಳ ಹೋರಾಟ ಕೊನೆಗೊಳ್ಳುತ್ತಿದ್ದು, ಇದೀಗ ದಕ್ಷಿಣ ಬಸ್ತಾರ್‌ನಲ್ಲಿ ಮಾತ್ರ ಈ ಹೋರಾಟಗಾರರು ಉಳಿದಿದ್ದಾರೆ ಎಂದು ಮಾವೋಗಳ ಶರಣಾಗತಿ ಸಂದರ್ಭದಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದರು.