January16, 2026
Friday, January 16, 2026
spot_img

ಒಂದೇ ವರ್ಷದಲ್ಲಿ 21 ಟಿ20 ಗೆಲುವು: ವಿಶ್ವ ದಾಖಲೆ ಮುರಿಯದಿದ್ದರೂ, ರಾಷ್ಟ್ರಕ್ಕೆ ಹೊಸ ಹೆಗ್ಗುರುತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಕ್ರಿಕೆಟ್ ತಂಡವು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಪಾಕ್ ಪಡೆ ನಿರ್ಮಿಸಿದೆ. ಈ ವರ್ಷ 21 ಗೆಲುವುಗಳನ್ನು ದಾಖಲಿಸುವ ಮೂಲಕ, ಪಾಕಿಸ್ತಾನವು ಮೊದಲ ಬಾರಿಗೆ 20ಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆದ ಸಾಧನೆ ಮಾಡಿದೆ.

ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧದ ಕಾದಾಟದಲ್ಲಿ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸುವುದರೊಂದಿಗೆ ಈ ವಿಶೇಷ ಮೈಲಿಗಲ್ಲನ್ನು ತಲುಪಿತು. ಈ ವರ್ಷ ಪಾಕ್ ತಂಡ ಆಡಿದ 34 ಟಿ20 ಪಂದ್ಯಗಳಲ್ಲಿ, ಅವರು ಬರೋಬ್ಬರಿ 21 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಇದಕ್ಕೂ ಮೊದಲು, 2021 ರಲ್ಲಿ ಪಾಕಿಸ್ತಾನವು 29 ಪಂದ್ಯಗಳಲ್ಲಿ 20 ಗೆಲುವುಗಳನ್ನು ಸಾಧಿಸಿತ್ತು. ಈ ಬಾರಿಯ 21 ಗೆಲುವುಗಳು 2021ರ ಶ್ರೇಷ್ಠ ಸಾಧನೆಯನ್ನು ಮೀರಿ ನಿಂತಿವೆ.

ಪಾಕಿಸ್ತಾನವು ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದರೂ, ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತಿಲ್ಲ. ಕಾರಣ: ಡಿಸೆಂಬರ್ ತಿಂಗಳಲ್ಲಿ ಪಾಕ್ ತಂಡವು ಯಾವುದೇ ಟಿ20 ಸರಣಿಯನ್ನು ಆಡುತ್ತಿಲ್ಲ. ಅವರ ಮುಂದಿನ ಸರಣಿ ಜನವರಿಯಲ್ಲಿ ನಿಗದಿಯಾಗಿದೆ.

ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಇನ್ನೂ ಉಗಾಂಡ ತಂಡದ ಹೆಸರಿನಲ್ಲಿದೆ. 2023 ರಲ್ಲಿ ಉಗಾಂಡಾ ಆಡಿದ 33 ಪಂದ್ಯಗಳಲ್ಲಿ 29 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ದಾಖಲೆ ನಿರ್ಮಿಸಿದೆ. ಉಗಾಂಡದ ಈ ವಿಶೇಷ ವಿಶ್ವ ದಾಖಲೆಯನ್ನು 2026 ರಲ್ಲಿ ಯಾರು ಮುರಿಯಲಿದ್ದಾರೆ ಎಂಬುದನ್ನು ಕ್ರೀಡಾಭಿಮಾನಿಗಳು ಕಾದು ನೋಡಬೇಕಿದೆ.

Must Read

error: Content is protected !!