February 20, 2026
Friday, February 20, 2026
spot_img

25 ಕೋಟಿ ಅನುದಾನ ಅಧಿಕೃತ ಪ್ರಕಟಣೆ ಅಲ್ಲ: ಸುಳ್ಯ ಶಾಸಕ ಕಚೇರಿ ಸ್ಪಷ್ಟನೆ

ಹೊಸದಿಗಂತ ಸುಳ್ಯ:

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನ 25 ಕೋಟಿ ಎಂಬ ವಿಷಯದಲ್ಲಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ವಿವರ ಶಾಸಕರ ಅಧಿಕೃತ ಪ್ರಕಟಣೆಯಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಕಚೇರಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಮೂಲ ಸೌಕರ್ಯ ನಿಧಿ 25 ಕೋಟಿ ರೂ. ಅನುದಾನ ಹಂಚಿಕೆಯ ವಿವರಗಳು ಪ್ರಕಟವಾಗಿದ್ದು, ಇದು ಶಾಸಕರ ಕಚೇರಿಯಿಂದ ಅಧಿಕೃತವಾಗಿ ನೀಡಿಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಶಾಸಕರ ಕಚೇರಿ ಪ್ರಕಟಣೆ ಹೊರಡಿಸಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಶಾಸಕಿ ಮಾತನಾಡಿ ಈ ರೀತಿಯ ವರದಿ ಪ್ರಕಟವಾಗುತ್ತಿದ್ದಂತೆ ಗ್ರಾಮಮಟ್ಟದಿಂದ ನಿರಂತರ ಕರೆಗಳು ಬರುತ್ತಿದ್ದು ಅಂತಹ ಯಾವುದೇ ಪಟ್ಟಿಗಳನ್ನು ಕಛೇರಿ ಮತ್ತು ನಾನು ನೀಡಿಲ್ಲವಾಗಿದ್ದು ಮುಂದೆ ಅಧಿಕೃತ ಪಟ್ಟಿಯನ್ನು ಮಾಧ್ಯಮಗಳ ಮೂಲಕ ತಿಳಿಯಪಡಿಸಲಾಗುವುದು ಎಂದು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !