February 21, 2026
Saturday, February 21, 2026
spot_img

34 ಗಂಟೆಗಳ ನಿರಂತರ ‘ರುದ್ರ ಪಠಣ’: ವಿಶ್ವದಾಖಲೆ ಬರೆದ ಯಲ್ಲಾಪುರದ ಪ್ರತಿಭೆಗಳು!

ಹೊಸದಿಗಂತ ಯಲ್ಲಾಪುರ:

ಕರ್ನಾಟಕ-ತಮಿಳುನಾಡು ಗಡಿಯ ಹೊಸೂರಿನಲ್ಲಿ ಇತ್ತೀಚೆಗೆ ನಡೆದ ವಿಶಿಷ್ಟ ‘ರುದ್ರ ಪಾರಾಯಣ’ ಕಾರ್ಯಕ್ರಮವೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಒಎಂಜಿ (OMG) ಸಂಸ್ಥೆಯು ಆಯೋಜಿಸಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ 25 ವೇದ ವಿದ್ವಾಂಸರು ಸತತ 34 ಗಂಟೆಗಳ ಕಾಲ ನಿರಂತರವಾಗಿ ರುದ್ರ ಪಠಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಈ ಐತಿಹಾಸಿಕ ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ ಗೌರವ ತಂದಿದೆ. ತಾಲೂಕಿನ ಶುಭಾಂಗ ಹೆಗಡೆ ಚಿಪಗೇರಿ ಹಾಗೂ ವೀರೇಂದ್ರ ಭಟ್ಟ ಕಾರವಾರ ಅವರು ಈ ಗಿನ್ನಿಸ್ ದಾಖಲೆ ನಿರ್ಮಿಸಿದ ತಂಡದ ಪ್ರಮುಖ ಸದಸ್ಯರಾಗಿ ಮಿಂಚಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಯ್ದ ವೇದ ವಿದ್ವಾಂಸರ ತಂಡವು ಏಕಾಗ್ರತೆ ಮತ್ತು ಭಕ್ತಿಯಿಂದ ಈ ಸುದೀರ್ಘ ಪಾರಾಯಣವನ್ನು ಪೂರೈಸಿದ್ದು, ಇದೀಗ ವಿಶ್ವಮಟ್ಟದ ಮನ್ನಣೆಗೆ ಪಾತ್ರವಾಗಿದೆ. ಈ ಸಾಧನೆಯು ಸಂಸ್ಕೃತ ಪಾಠಶಾಲೆಗೆ ಹಾಗೂ ಇಡೀ ಯಲ್ಲಾಪುರ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !