March 9, 2026
Monday, March 9, 2026
spot_img

ಛತ್ತೀಸ್​ಗಡದ ದಾಂತೆವಾಡದಲ್ಲಿ 12 ಮಂದಿ ಮಹಿಳೆಯರು ಸಹಿತ 37 ನಕ್ಸರು ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್​ಗಡದ ದಾಂತೆವಾಡ ಜಿಲ್ಲೆಯಲ್ಲಿ ಲಕ್ಷಾಂತರ ರೂ. ತಲೆದಂಡ ಹೊತ್ತಿದ್ದ ಹಲವು ನಕ್ಸಲರು ಭಾನುವಾರ ಶರಣಾಗಿದ್ದಾರೆ.

ವರದಿಗಳ ಪ್ರಕಾರ 37 ನಕ್ಸಲರು ಶರಣಾಗಿದ್ದಾರೆ. ಇವರ ಪೈಕಿ 27 ಮಂದಿಗೆ 65 ಲಕ್ಷ ರೂ ತಲೆದಂಡ ಪ್ರಕಟಿಸಲಾಗಿತ್ತು ಎನ್ನಲಾಗಿದೆ.

ಒಟ್ಟು 12 ಮಂದಿ ಮಹಿಳೆಯರೂ ಇದ್ದ ಈ 37 ನಕ್ಸಲರು ಪೂನಾ ಮಾರ್ಗಮ್ (ಮುಖ್ಯವಾಹಿನಿಗೆ ಸೇರ್ಪಡೆ) ಅಭಿಯಾನದ ಭಾಗವಾಗಿ ಭಾನುವಾರ ಹಿರಿಯ ಪೊಲೀಸ್ ಹಾಗೂ ಸಿಆರ್​ಪಿಎಫ್ ಅಧಿಕಾರಿಗಳ ಸಮ್ಮುಖದಲ್ಲಿ ಶಸ್ತ್ರತ್ಯಾಗ ಮಾಡಿದ್ದಾರೆ.

ಕುಮಾಲಿ ಅಲಿಯಾಸ್ ಅನಿತಾ ಮಾಂಡವಿ, ಗೀತಾ ಅಲಿಯಾಸ್ ಲಕ್ಷ್ಮೀ ಮಡಕಂ, ರಂಜನ್ ಅಲಿಯಾಸ್ ಸೋಮಾ ಮಾಂಡವಿ, ಭೀಮಾ ಅಲಿಯಾಸ್ ಜಹಾಜ್ ಕಲ್ಮು ಅವರು ಶರಣಾಗತ ನಕ್ಸಲರಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ತಲಾ 8 ಲಕ್ಷ ರೂ ತಲೆದಂಡ ಇತ್ತು.

ನಕ್ಸಲರಿಗೆ ಶರಣಾಗಲು ಅನುವಾಗುವಂತಹ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳ ಫಲವಾಗಿ ಬಹಳಷ್ಟು ಜನರು ಹಿಂಸಾಮಾರ್ಗಳನ್ನು ತ್ಯಜಿಸಿ ಸಮಾಜದೊಳಗೆ ಸೇರ್ಪಡೆಯಾಗಿದ್ದಾರೆ. ಶರಣಾಗತಿ ಹೊಂದಿದ ಪ್ರತೀ ನಕ್ಸಲರಿಗೆ 50,000 ರೂನ ತತ್​ಕ್ಷಣದ ಧನಸಹಾಯ, ಕೌಶಲ್ಯಾಭಿವೃದ್ಧಿ, ಕೃಷಿ ಭೂಮಿ ಇತ್ಯಾದಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !