Thursday, September 11, 2025

ನೇಪಾಳದಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದುರುಗಿದ 38 ಭಾರತೀಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಿಂದ 38 ಭಾರತೀಯರನ್ನು ರಾಯಭಾರ ಕಚೇರಿಯ ಸಹಾಯದಿಂದ ಭಾರತಕ್ಕೆ ವಾಪಾಸ್ ಕರೆ ತರಲಾಗಿದೆ.

ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ 38 ಭಾರತೀಯರನ್ನು ರಕ್ಸೌಲ್ ಗಡಿಯ ಮೂಲಕ ಬಿಹಾರಕ್ಕೆ ಕರೆತರಲಾಗಿದೆ. ಇದರಲ್ಲಿ ಆಂಧ್ರ ಪ್ರದೇಶದ 22 ಮತ್ತು ಕರ್ನಾಟಕದ 16 ಜನರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

38 ಭಾರತೀಯರನ್ನು ಬಿರ್ಗುಂಜ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಬಿರ್ಗುಂಜ್- ರಕ್ಸೌಲ್ ಗಡಿಯುದ್ದಕ್ಕೂ ಮಾರ್ಗದರ್ಶನ ಮಾಡಿ ಬಿಹಾರದ ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಭಾರತೀಯರು ಸುರಕ್ಷಿತವಾಗಿ ಭಾರತ ತಲುಪಲು ಮಾರ್ಗದರ್ಶನ ಮಾಡಿರುವುದಕ್ಕೆ ಭಾರತೀಯ ರಾಯಭಾರ ಕಚೇರಿ ಮತ್ತು ಭದ್ರತಾ ಸಂಸ್ಥೆಗಳಿಗೆ ಅಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.

ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಭಾರತೀಯ ಪ್ರಜೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೀಡಿದ್ದು, ಸಹಾಯ ಅಥವಾ ಸ್ಥಳಾಂತರಿಸಲು ಸಹಾಯದ ಅಗತ್ಯವಿದ್ದರೆ ಸಂಪರ್ಕಿಸುವಂತೆ ತಿಳಿಸಿದೆ.

ಇದನ್ನೂ ಓದಿ