January19, 2026
Monday, January 19, 2026
spot_img

ರಾತ್ರೋರಾತ್ರಿ ಸಿಲಿಕಾನ್ ಸಿಟಿ ರೌಂಡ್ಸ್ ಹೊಡೆದ ಡಿಕೆಶಿ ಸಾಹೇಬ್ರು! ಯಾವ ಕಾರಣಕ್ಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಪಣ ತೊಟ್ಟಿದ್ದು, ಈ ನಡುವೆ ಸೋಮವಾರ ತಡರಾತ್ರಿ ಡಿಕೆ ಶಿವಕುಮಾರ್ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.

ಯಲಹಂಕದ ಬಾಗಲೂರು ಮುಖ್ಯರಸ್ತೆ, ಎಂಎಸ್ ಪಾಳ್ಯದ ಸಂದೀಪ್ ಉಣ್ಣೀಕೃಷ್ಣನ್ ರೋಡ್ ಮತ್ತು ಈಜಿಪುರದ ಪ್ಲೈಓವರ್ ಕಾಮಗಾರಿಯ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಅವರು, ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ ಸಿದ್ದಪಡಿಸಿದ್ದೇವೆ. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಆಪ್‌ನಲ್ಲಿ ನಾಗರೀಕರು ದೂರುಗಳನ್ನು ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

Must Read

error: Content is protected !!