Tuesday, December 30, 2025

5 ಜನ, 4 ನಿಮಿಷ ಅಷ್ಟೇ..! ಕಣ್ಣು ಮಿಟುಕಿಸುವಷ್ಟರಲ್ಲಿ ಕೆಜಿಗಟ್ಟಲೆ ಚಿನ್ನ ಮಂಗಮಾಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದ ದರೋಡೆ ನಗರದ ಚಿನ್ನಾಭರಣ ವ್ಯಾಪಾರಿಗಳಿಗೆ ದೊಡ್ಡ ಶಾಕ್ ನೀಡಿದೆ. ʻಸ್ಕೈ ಗೋಲ್ಡ್‌ ಅಂಡ್ ಡೈಮಂಡ್ಸ್ʼ ಅಂಗಡಿಗೆ ದರೋಡೆಕೋರರು ನುಗ್ಗಿ ಕೇವಲ ನಾಲ್ಕು ನಿಮಿಷದಲ್ಲಿ ಬೆಲೆಬಾಳುವ ಚಿನ್ನ-ವಜ್ರಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ದರೋಡೆಕೋರರು ಐದು ಜನರ ತಂಡವಾಗಿ ಬಂದಿದ್ದು, ಅಂಗಡಿಗೆ ನುಗ್ಗುವಾಗ ಎರಡು ಚೀಲಗಳನ್ನು ಮೊದಲು ತಂದಿದ್ದರು. ಅಂಗಡಿಯಲ್ಲಿ ಇಬ್ಬರು ಚಿನ್ನಾಭರಣವನ್ನು ಗುಡ್ಡೆ ಹಾಕುತ್ತಿದ್ದರೆ, ಇಬ್ಬರು ಗನ್ ಹಿಡಿದು ಸಿಬ್ಬಂದಿಯನ್ನು ಬೆದರಿಸುತ್ತಿದ್ದರು, ಮತ್ತೊಬ್ಬನು ಬಾಗಿಲ ಬಳಿ ಕಾಯುತ್ತಿದ್ದ. ಈ ತಂಡವು ಎಲ್ಲವನ್ನೂ 4 ನಿಮಿಷದಲ್ಲಿ ಚೀಲದಲ್ಲಿ ತುಂಬಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ, ಇಬ್ಬರು ಬೈಕ್‌ನಲ್ಲಿ, ಮೂವರು ಇನ್ನೊಂದು ಬೈಕ್‌ನಲ್ಲಿ ಹನಸೂರುದಿಂದ ಕೆ.ಆರ್ ನಗರ ಕಡೆ ಬೈಪಾಸ್ ರಸ್ತೆಯ ಮೂಲಕ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಪೊಲೀಸರು ದರೋಡೆಕೋರರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

error: Content is protected !!