Saturday, October 25, 2025

ಬೆಂಗಳೂರಲ್ಲಿ ಪಟಾಕಿ ಸಿಡಿತದಿಂದ 56 ಮಂದಿಗೆ ಗಾಯ! ರಾಜಧಾನಿಯಲ್ಲಿ ವಾಯುಮಾಲೀನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಇದರ ಜೊತೆಯಲ್ಲೇ ಪಟಾಕಿ ಅವಘಡಗಳೂ ಸಂಭವಿಸಿದೆ. ಈವರೆಗೂ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ 56 ಮಂದಿಗೆ ಗಾಯಗೊಂಡಿದ್ದಾರೆ.

ನಾರಾಯಣ ನೇತ್ರಾಲಯ ಒಂದರಲ್ಲೇ ಒಟ್ಟು 43 ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಬಾಂಬ್ ಪಟಾಕಿ ಹೊಡೆಯುವ ವೇಳೆ ಸಿಡಿದು 18 ವರ್ಷದ ಯುವಕನ ಕಣ್ಣಿನ ಗಾಯವಾಗಿದೆ. ಮತ್ತೊಂದೆಡೆ ಪಟಾಕಿ ಸಿಡಿಸುವ ವೇಳೆ 10 ವರ್ಷದ ಬಾಲಕನ ಕಣ್ಣಿಗೆ ಗಾಯವಾಗಿದ್ದು, ಕಣ್ಣಿನ ಕಾರ್ನಿಯ ಡ್ಯಾಮೇಜ್ ಆಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿಗೆ ಕೆಟ್ಟಗಾಳಿ ದಿಗ್ಭಂಧನ
ದೀಪಾವಳಿ ದಿನ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ಯಂತೆ. ದೀಪಾವಳಿಯ ಆರಂಭದ ಒಂದೇ ದಿನಕ್ಕೆ‌ ನಗರದ ವಾಯು ಗುಣಮಟ್ಟ ಇಳಿಕೆಕಂಡಿದ್ದು, ಸಾಮಾನ್ಯ ದಿನಕ್ಕಿಂತ ಶೇಕಡಾ 12ರಷ್ಟು ಹೆಚ್ಚಿನ ಮಾಲಿನ್ಯ ಸೃಷ್ಟಿಯಾಗಿದೆ ಎನ್ನಲಾಗಿದೆ.

ಪಟಾಕಿಯಿಂದಾಗಿ ಬೆಂಗಳೂರು ನಗರದಾದ್ಯಂತ ಭಾರಿ ವಾಯು ಮಾಲಿನ್ಯ ದಾಖಲಾಗಿದೆ. ಸಾಮಾನ್ಯ ದಿನಕ್ಕಿಂತ‌ ಶೇಕಡಾ 12%ರಷ್ಟು ನಗರದ AQI ಏರಿಕೆಯಾಗಿದೆ ಎನ್ನಲಾಗಿದೆ.

error: Content is protected !!