Friday, September 5, 2025

ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ನಗರದಲ್ಲಿ ಚಲಿಸುತ್ತಿರುವಾಗಲೇ ರೈಲಿನ ಬೋಗಿಗಳು ಬೇರ್ಪಟ್ಟು ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ. ಉಳಿದ ಬೋಗಿಗಳು ಇಂಜಿನ ಜೊತೆ ಮುಂದೆ ಸಾಗಿವೆ. ರೈಲು ಸ್ವಲ್ಪ ದೂರ ಮುಂದೆ ಹೋಗಿ ನಿಂತಿದೆ.

ಮಾಹಿತಿ ತಿಳಿದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಎಂಜಿನಿಯರ್ ಮತ್ತು ಮೆಕ್ಯಾನಿಕಲ್ ಸುಮಾರು 48 ನಿಮಿಷ ಕಾರ್ಯಾಚರಣೆ ನಡೆಸಿ ಬೇರ್ಪಟ್ಟ ಬೋಗಿಗಳನ್ನು ಜೋಡಿಸುವಲ್ಲಿ ಯಶಸ್ವಿಯಾದರು. ಬೋಗಿ ಜೋಡಣೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ. ಶಿವಮೊಗ್ಗ ರೇಲ್ವೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ