ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಈ ಚಿತ್ರ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ.
ಆದಗ್ಯೂ ಸಿನಿಮಾದ ಅಬ್ಬರ ಮಾತ್ರ ಈವರೆಗೆ ನಿಂತಿಲ್ಲ. ಇದು ರಾಜ್ ಬಿ ಶೆಟ್ಟಿ ವೃತ್ತಿ ಜೀವನಕ್ಕೆ ಮೈಲೇಜ್ ಕೊಟ್ಟಿದೆ. ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇನ್ನೂ ಕೆಲವು ವಾರ ಸಿನಿಮಾದ ಕಲೆಕ್ಷನ್ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.
‘ಸು ಫ್ರಮ್ ಸೋ’ ನಾಲ್ಕನೇ ಭಾನುವಾರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಭಾನುವಾರ 2.89 ಕೋಟಿ ರೂಪಾಯಿ ಹರಿದು ಬಂದಿದೆ. ಕನ್ನಡದ ಚಿತ್ರವೊಂದು ನಾಲ್ಕನೇ ವಾರ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಇನ್ನು, ಮಲಯಾಳಂನಲ್ಲೂ ಸಿನಿಮಾ ಅಬ್ಬರಿಸಿದೆ. ಚಿತ್ರಕ್ಕೆ ಕೇರಳದಿಂದ 5.22 ಕೋಟಿ ರೂಪಾಯಿ ಗಳಿಕೆ ಆಗಿದೆ. ವಿದೇಶದಿಂದ ಚಿತ್ರಕ್ಕೆ 13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
‘ಸು ಫ್ರಮ್ ಸೋ’ ಚಿತ್ರದ ಬಜೆಟ್ 4.30 ಕೋಟಿ ರೂಪಾಯಿ. ಒಟ್ಟಾರೆ ಆಗಿ ತಂಡದವರು ಸಿನಿಮಾ ಮೇಲೆ 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಸಿನಿಮಾದ ಒಟ್ಟಾರೆ ಗಳಿಕೆ 104 ಕೋಟಿ ರೂಪಾಯಿ. ಅಂದರೆ, ಸಿನಿಮಾ ತನ್ನ ಬಜೆಟ್ನ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದೆ. ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ಚಿತ್ರ ಮೊದಲ ದಿನದ ಗಳಿಕೆ ಕೇವಲ 78 ಲಕ್ಷ ರೂಪಾಯಿ ಆಗಿತ್ತು. ಈ ರೀತಿ ಓಪನಿಂಗ್ ಪಡೆದ ಈಗ ಸಿನಿಮಾ ಪ್ರತಿ ದಿನ 2+ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ ಅನ್ನೋದು ವಿಶೇಷ.