Saturday, September 20, 2025

Side effects of AC | ತಣ್ಣಗೆ ಗಾಳಿ ಅಂತ 24 ಗಂಟೇನೂ AC ಮುಂದೆ ಕುಳಿತುಕೊಳ್ತೀರಾ? ಹುಷಾರ್!

ಇಂದಿನ ಜೀವನ ಶೈಲಿಯಲ್ಲಿ ಕಚೇರಿ, ಮಾಲ್ ಅಥವಾ ಶೋ ರೂಮ್ ಎಲ್ಲೆಡೆ ಏರ್‌ಕಂಡೀಷನರ್ ಬಳಸುವುದು ಸಾಮಾನ್ಯವಾಗಿದೆ. ಬಿಸಿಲಿನಿಂದ ರಕ್ಷಣೆ ನೀಡುವ ಎಸಿ ತಾತ್ಕಾಲಿಕ ಆರಾಮ ನೀಡುತ್ತಿದ್ದರೂ, ದೀರ್ಘಕಾಲ ಎಸಿಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಮೇಲೆ ಹಲವು ಕೆಟ್ಟ ಪರಿಣಾಮಗಳು ಬೀಳುತ್ತವೆ. ತಂಪಾದ ವಾತಾವರಣದ ಹಿತಕ್ಕಿಂತ ಹಾನಿಯೇ ಹೆಚ್ಚು ಎನ್ನುತ್ತಾರೆ ವೈದ್ಯರು.

ಉಸಿರಾಟದ ತೊಂದರೆಗಳು
ಎಸಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗಂಟಲು ಒಣಗುವುದು, ಮೂಗಿನ ಅಡಚಣೆ, ರಿನಿಟಿಸ್ ಮೊದಲಾದ ಉಸಿರಾಟ ಸಮಸ್ಯೆಗಳು ಕಾಡುತ್ತವೆ.

ಅಸ್ತಮಾ ಮತ್ತು ಅಲರ್ಜಿ
ಎಸಿಯನ್ನು ಸ್ವಚ್ಛಗೊಳಿಸದಿದ್ದರೆ ಅಲರ್ಜಿಗಳು ತೀವ್ರಗೊಳ್ಳುತ್ತವೆ. ಅಸ್ತಮಾ ರೋಗಿಗಳಿಗೆ ಇದು ಹೆಚ್ಚು ಅಪಾಯಕಾರಿ.

ಕಣ್ಣು ಮತ್ತು ಕೂದಲಿನ ಸಮಸ್ಯೆ
ಡ್ರೈ ಐ ಸಿಂಡ್ರೋಮ್‌ ಹೆಚ್ಚಾಗುತ್ತದೆ. ಜೊತೆಗೆ ಕೂದಲು ಒಣಗಿ ಫ್ರಿಜಿಯಾಗುವುದು, ಉದುರುವಿಕೆ ಹೆಚ್ಚಾಗುವುದು ಸಾಮಾನ್ಯ.

ನಿರ್ಜಲೀಕರಣ ಮತ್ತು ತಲೆನೋವು
ಎಸಿ ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ನಿರ್ಜಲೀಕರಣ, ತಲೆನೋವು, ಒಣ ಚರ್ಮ, ಆಯಾಸ ಉಂಟಾಗುತ್ತವೆ.

ಸ್ನಾಯು ನೋವು
ಹವಾನಿಯಂತ್ರಿತ ಕೋಣೆಯಲ್ಲಿ ಹೆಚ್ಚು ಹೊತ್ತು ಕುಳಿತರೆ ಸ್ನಾಯುಗಳು ಗಟ್ಟಿಯಾಗಿ ನೋವು ಉಂಟಾಗಬಹುದು.

ಇದನ್ನೂ ಓದಿ