ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳು ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿವೆ. ಆನ್‌ಲೈನ್ ಖರೀದಿ, ಹೋಟೆಲ್ ಬಿಲ್ ಪಾವತಿ, ವಿದೇಶಿ ಪ್ರಯಾಣ – ಎಲ್ಲಿಯಲ್ಲಾದರೂ ಕ್ರೆಡಿಟ್ ಕಾರ್ಡ್ ಬಳಕೆಯು ಸಾಮಾನ್ಯವಾಗಿದೆ. ಬ್ಯಾಂಕುಗಳು ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳು ಹಾಗೂ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಜನರು ಇದಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿರುವ ತಪ್ಪುಗಳು ವ್ಯಕ್ತಿಯನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ.

ಕ್ರೆಡಿಟ್ ಕಾರ್ಡ್ ಬಳಸುವಾಗ ಪಾಲಿಸಬೇಕಾದ ನಿಯಮಗಳು
ಬಜೆಟ್ ಪಾಲನೆ ಮಾಡಿ
ಕ್ರೆಡಿಟ್ ಕಾರ್ಡ್ ಉಚಿತ ಹಣವಲ್ಲ. ನಿಮ್ಮ ಮಾಸಿಕ ಆದಾಯಕ್ಕೆ ತಕ್ಕಂತೆ ಖರ್ಚು ಮಾಡುವುದೇ ಆರ್ಥಿಕ ಶಿಸ್ತಿನ ಮುಖ್ಯ ಅಂಶ.
ಖರ್ಚು ಮಿತಿ ನಿಗದಿ ಮಾಡಿ
ಪ್ರತಿ ಕಾರ್ಡ್‌ಗೆ ಖಾಸಗಿ ಮಿತಿ ಇಟ್ಟುಕೊಳ್ಳಿ. ಇದರಿಂದ ಅತಿಯಾದ ಖರ್ಚು ತಪ್ಪುತ್ತದೆ ಹಾಗೂ ಆರ್ಥಿಕ ನಿಯಂತ್ರಣ ಸಿಗುತ್ತದೆ.
ಹಿಡನ್ ಚಾರ್ಜ್‌ಗಳನ್ನು ಗಮನಿಸಿ
ರಿವಾರ್ಡ್ ಪಾಯಿಂಟ್ ಮತ್ತು ಆಫರ್‌ಗಳ ಹಿಂದೆ ಅಡಗಿರುವ ಹೆಚ್ಚುವರಿ ಶುಲ್ಕಗಳಿರುತ್ತವೆ. ಆದ್ದರಿಂದ ಎಲ್ಲಾ ನಿಯಮಗಳನ್ನು ಓದಿ ತಿಳಿದುಕೊಳ್ಳುವುದು ಅವಶ್ಯ.

ಎಟಿಎಂ ಹಿಂಪಡೆಯುವಿಕೆಗೆ ಬೇಡ
ನಗದು ಮುಂಗಡ ಪಡೆಯಲು ಕ್ರೆಡಿಟ್ ಕಾರ್ಡ್ ಬಳಸಬೇಡಿ. ಇದರಿಂದ ಹೆಚ್ಚಿನ ಬಡ್ಡಿದರ ಮತ್ತು ಶುಲ್ಕಗಳು ವಿಧಿಸಲಾಗುತ್ತವೆ.
ಮಿತಿಯ 30% ಮಾತ್ರ ಬಳಸಿ
ಕಾರ್ಡ್‌ನ ಒಟ್ಟು ಮಿತಿಯ ಒಂದು ಮೂರನೇ ಭಾಗಕ್ಕಿಂತ ಹೆಚ್ಚು ಬಳಸಿದರೆ ದಂಡ ಹಾಗೂ ಬಡ್ಡಿ ಹೆಚ್ಚಾಗಬಹುದು. ಕಡಿಮೆ ಬಳಕೆ ಕ್ರೆಡಿಟ್ ಸ್ಕೋರ್‌ಗೂ ಒಳ್ಳೆಯದು.
ಸಕಾಲಿಕ ಮರುಪಾವತಿ ಮಾಡಿ
ಬಿಲ್‌ಗಳನ್ನು ಸಮಯಕ್ಕೆ ಪಾವತಿಸದಿದ್ದರೆ ಬಡ್ಡಿ ದರ ಭಾರಿಯಾಗುತ್ತದೆ. ಆದ್ದರಿಂದ ನಿಯಮಿತವಾಗಿ ಮರುಪಾವತಿ ಮಾಡುವುದರಿಂದ ಸಾಲದ ಹೊರೆ ತಪ್ಪುತ್ತದೆ.
