January22, 2026
Thursday, January 22, 2026
spot_img

ಕಾಶ್ಮೀರದ ನದಿ, ಡ್ಯಾಂಗಳು ಭಯೋತ್ಪಾದಕರ ನಿಯಂತ್ರಣಕ್ಕೆ ಬರುತ್ತವೆ: ಭಾರತಕ್ಕೆ ಲಷ್ಕರ್ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನೇರ ಬೆಂಬಲದ ಸಾಕ್ಷ್ಯಗಳು ಮತ್ತೆ ಜಗತ್ತಿನ ಮುಂದೆ ಬಯಲಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ, ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.

ಸುಮಾರು ಎರಡು ನಿಮಿಷಗಳ ಈ ವೀಡಿಯೊದಲ್ಲಿ, ಭಾರತದ ವಿರುದ್ಧ ಕಸೂರಿ ಕಟುವಾಗಿ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರದ ನದಿಗಳು ಹಾಗೂ ಅಣೆಕಟ್ಟುಗಳು ಶೀಘ್ರದಲ್ಲೇ ಭಯೋತ್ಪಾದಕರ ನಿಯಂತ್ರಣಕ್ಕೆ ಬರುತ್ತವೆ ಎಂದು ಆತ ಎಚ್ಚರಿಕೆ ನೀಡಿದ್ದಾನೆ. ಮುರಿಡ್ಕೆಯಲ್ಲಿದ್ದ ಲಷ್ಕರ್ ಪ್ರಧಾನ ಕಚೇರಿ ‘ಆಪರೇಷನ್ ಸಿಂದೂರ’ ಸಮಯದಲ್ಲಿ ನಾಶವಾಗಿದ್ದರೂ, ಅದನ್ನು ಪುನರ್ನಿರ್ಮಿಸಲು ಪಾಕಿಸ್ತಾನ ಹಣ ಒದಗಿಸಿದೆ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಮಾಹಿತಿ ಪ್ರಕಾರ, ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಕಸೂರಿಯೇ ಆಗಿದ್ದನು. ಈ ವಿಡಿಯೋದಲ್ಲಿ ಎಲ್‌ಇಟಿಗೆ ಹೊಸ ಸಂಪನ್ಮೂಲಗಳು ದೊರೆತಿವೆ ಎಂದು ಅವನು ಬೇರಾರಿಗೂ ತಿಳಿಯದ ಸುಳಿವು ನೀಡಿದ್ದಾನೆ. ಪಂಜಾಬ್ ಪ್ರಾಂತ್ಯದ ಮುರಿಡ್ಕೆ ಹಲವು ವರ್ಷಗಳಿಂದ ಲಷ್ಕರ್ ಕಾರ್ಯಾಚರಣೆಗಳ ಕೇಂದ್ರವಾಗಿದ್ದು, ಇದೀಗ ಮತ್ತೆ ಸಕ್ರಿಯಗೊಳ್ಳುತ್ತಿದೆ ಎಂಬುದನ್ನು ಈ ವಿಡಿಯೋ ದೃಢಪಡಿಸಿದೆ.

Must Read