October 28, 2026
Wednesday, October 28, 2026
spot_img

ನೂರಾರು ಜನರ ಪ್ರಾಣ ಉಳಿಸಿದ್ದ ಭಾರತೀಯ ಪೈಲಟ್‌ ಸ್ಮಿತ್ ಮಚ್ಚರ್​ಗೆ ಯುಎಇಯ ಪ್ರತಿಷ್ಠಿತ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಮಾನ ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ನಡೆದ ಹಠಾತ್‌ ದಾಳಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡರೂ ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ನೂರಾರು ಜನರ ಜೀವ ಉಳಿಸಿದ್ದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಹಾಗೂ ಫ್ಲೈ ದುಬೈ ಸಿಬ್ಬಂದಿಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ಜಾಯೆದ್ II ಪ್ರಶಸ್ತಿ ಯನ್ನು ಘೋಷಿಸಿದ್ದರು. ದುಬೈನ ಕ್ರೌನ್ ಪ್ರಿನ್ಸ್, ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ವಿಮಾನದಲ್ಲಿ ಏನಾಗಿತ್ತು?
ಸೆ.30ರಂದು ಫ್ಲೈ ದುಬೈ ವಿಮಾನವು ಆಗಸದಲ್ಲಿದ್ದ ವೇಳೆ ಕೋ ಪೈಲಟ್‌ ಆಗಿದ್ದ ವ್ಯಕ್ತಿಯಿಂದ ಕಾಟ್‌ಪಿಕ್‌ನಲ್ಲಿ ಸ್ಮಿತ್‌ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ರಕ್ತ ಸುರಿದರೂ ದುಷ್ಕರ್ಮಿಯ ದಾಳಿಯಿಂದ ತಪ್ಪಿಸಿಕೊಂಡು ವಿಮಾನದ ನಿಯಂತ್ರಣ ಕಳೆದುಕೊಳ್ಳದೇ ಕಾಕ್‌ಪಿಟ್‌ನ ಲಾಕ್‌ ತೆಗೆದಿದ್ದರು. ತಕ್ಷಣ ಸಿಬ್ಬಂದಿ ಹಾಗೂ ಪ್ರಯಾಣಿಕರು ಆಗಮಿಸಿ ವಿಮಾನದ ಕಂಟ್ರೋಲ್‌ ತೆಗೆದುಕೊಂಡಿದ್ದರು. ಸ್ಮಿತ್‌ ಧೈರ್ಯ ತೋರದೇ ಇದ್ದಿದ್ದರೆ ಇಡೀ ವಿಮಾನವನ್ನು ಕ್ರಾಶ್‌ ಮಾಡುವ ಪ್ಲಾನ್‌ ಹೊಂದಲಾಗಿದ್ದು, ನೂರಕ್ಕೂ ಹೆಚ್ಚು ಜನರ ಮಾರಣಹೋಮ ಆಗುವುದನ್ನು ತಡೆಯಲಾಗಿತ್ತು.

Must Read