ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ ಈ ವರ್ಷ ನವೆಂಬರ್ ಒಂದರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶನ ನೀಡಿದೆ.
ಈ ಬಗ್ಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು. ಈ ಬಾರಿ ರಾಜ್ಯೋತ್ಸವ ಭಾನುವಾರ ಬಂದಿದೆ. ಹೀಗಾಗಿ ರಜೆ ಎಂದು ಭಾವಿಸುವುದು ಬೇಡ ಎಂದು ಇಲಾಖೆ ಹೇಳಿದೆ. ಆದರೆ ಹಲವು ಶಾಲಾ ಆಡಳಿತ ಮಂಡಳಿಗಳು ಈ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದೆ.
ಭಾನುವಾರ ನಾವು ರಾಜ್ಯೋತ್ಸವ ಆಚರಣೆ ಮಾಡಲು ತಯಾರಿದ್ದೇವೆ ಆದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅಷ್ಟೇ ಅಲ್ಲದೇ ಐದು ತಿಂಗಳಿನಿಂದ ಭಾನುವಾರವೂ ರಜೆ ಇಲ್ಲದಂತೆ ಎಸ್‌ಐಆರ್ ಕೆಲಸವನ್ನು ಶಿಕ್ಷಕರು ಮಾಡಿದ್ದಾರೆ. ಎಸ್‌ಐಆರ್ ನಂತರ ಇದೇ ಮೊದಲ ಬಾರಿಗೆ ಭಾನುವಾರ ರಜೆ ಸಿಕ್ಕಿದೆ ಎನ್ನುವುದು ಕೆಲ ಶಿಕ್ಷಕರ ವಾದವಾಗಿದೆ.



