October 29, 2026
Thursday, October 29, 2026
spot_img

ಅರ್ನಬ್‌ ಚಂಡಮಾರುತಕ್ಕೆ ನಡುಗಿದ ಆಂಧ್ರ: ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ, ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ ಅರ್ನಬ್‌ ಚಂಡಮಾರುತವು ದುಸ್ವಪ್ನದಂತೆ ಅಪ್ಪಳಿಸಿದ್ದು, ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಗಂಟೆಗೆ ಗಂಟೆಗೆ 150 ರಿಂದ 180 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕಾಕಿನಾಡ ಹಾಗೂ ಕೋನಸೀಮ ಪ್ರದೇಶದಲ್ಲಿ ಸಾವಿರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಈಗಾಗಲೇ ಸುಮಾರು 57,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ರೈಲು-ವಿಮಾನ ಹಾರಟ ಸ್ಥಗಿತ

ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಭೋರ್ಗರೆಯುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೋ ಎನ್ನುವ ಭೀತಿ ಎದುರಾಗಿದೆ. ಚಂಡಮಾರುತದಿಂದಾಗಿ ವಿಮಾನ ಸೇವೆಗಳು, ರೈಲು ಸೇವೆಗಳು ಬಂದ್‌ ಆಗಿವೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸದ್ಯ ಇವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರೈತರ ಬೆಳೆ, ಮನೆ ಎಲ್ಲವೂ ನೀರುಪಾಲಾಗಿದ್ದು, ಜನ ಪ್ರಾಣ ಉಳಿದಿದ್ದಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿದ್ದಾರೆ.

Must Read