Tuesday, October 14, 2025

ಉತ್ತರ ಕೊರಿಯಾದಲ್ಲಿ ಇನ್ಮುಂದೆ ಈ ಮೂರು ಇಂಗ್ಲಿಪ್ ಪದಗಳ ಬಳಕೆ ಮಾಡುವಂತಿಲ್ಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ದೇಶದಲ್ಲಿ ಮೂರು ಇಂಗ್ಲಿಪ್ ಪದಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಕಿಮ್ ಜಾಂಗ್-ಉನ್, ವಿದೇಶಿ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ತಡೆಗಟ್ಟಲು ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಉತ್ತರ ಕೊರಿಯಾದ ಭಾಷೆ ಮತ್ತು ಶಬ್ದಕೋಶ ಉತ್ತೇಜಿಸುವ ಕ್ರಮ ಇದಾಗಿದೆ ಹೇಳಿಕೊಂಡಿದ್ದಾರೆ.

ಕಿಮ್ ಜಾಂಗ್-ಉನ್ ನಿಷೇಧಿಸಿರುವ ಮೂರು ಪದಗಳು
“ಹ್ಯಾಂಬರ್ಗರ್,” “ಐಸ್ ಕ್ರೀಮ್,” ಮತ್ತು “ಕರೋಕೆ” (ice-cream, hamburger, karaoke) ಈ ಮೂರು ಪದಗಳನ್ನು ನಿಷೇಧಿಸಲಾಗಿದೆ.

ಹ್ಯಾಂಬರ್ಗರ್ ಅನ್ನೋದು ಮಾಂಸದಿಂದ ತಯಾರಿಸಲಾದ ಆಹಾರವಾಗಿದೆ.

ಬದಲಿಯಾಗಿ ಬಳಸಲು ಸೂಚಿಸಿದ ಪದಗಳು
ಹ್ಯಾಂಬರ್ಗರ್ ಬದಲಾಗಿ ದಹಿನ್-ಗೋಗಿ ಗಿಯೊಪ್ಪಾಂಗ್ ಬಳಕೆ ಮಾಡಬೇಕು.
ಐಸ್ ಕ್ರೀಮ್ ಬದಲಾಗಿ ಎಸುಕಿಮೊ ಬಳಕೆ ಮಾಡಬೇಕು.
ಕ್ಯಾರಿಯೋಕೆ ಬದಲಾಗಿ ಆನ್-ಸ್ಕ್ರೀನ್ ಪಕ್ಕವಾದ್ಯ ಯಂತ್ರಗಳು ಎಂದು ಕರೆಯಬೇಕು.

ಈ ಪದಗಳು ಮತ್ತು ಘೋಷಣೆಗಳನ್ನು ಮಾರ್ಗದರ್ಶಿಗಳು ನೆನಪಿಟ್ಟುಕೊಳ್ಳಬೇಕಾಗುತ್ತದೆ ಎಂದು ಆದೇಶ ಮಾಡಲಾಗಿದೆ. ಈ ಹಿಂದೆ ವಿದೇಶಿ ಚಲನಚಿತ್ರ, ವೆಬ್ ಸಿರೀಸ್ ವೀಕ್ಷಣೆ ಮತ್ತು ಶೇರ್ ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು. ಒಂದು ನಿಯಮ ಪಾಲನೆ ತಪ್ಪಿದ್ರೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಇಷ್ಟು ಮಾತ್ರವಲ್ಲ ಉತ್ತರ ಕೊರಿಯಾದಲ್ಲಿ ವಿದೇಶಿ ಮಾಧ್ಯಮಗಳ ಪ್ರಸಾರವನ್ನು ಸಹ ತಡೆಹಿಡಿಯಲಾಗಿದೆ. ಇದೊಂದು ದಬ್ಬಾಳಿಕೆಯ ಪ್ರವೃತ್ತಿ ಎಂದು ವಿಶ್ವಸಂಸ್ಥೆ ಕಳವಳವನ್ನು ವ್ಯಕ್ತಪಡಿಸಿತ್ತು.

error: Content is protected !!