November 2, 2026
Monday, November 2, 2026
spot_img

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ ದುರಂತ : ಐವರು ಕನ್ನಡಿಗರ ಪಾರ್ಥಿವ ಶರೀರ ಬೆಂಗಳೂರಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್‌ ದುರಂತದಲ್ಲಿ ಐವರು ಕನ್ನಡಿಗರು ಪ್ರಾಣ ಕಳೆದುಕೊಂಡಿದ್ದು, ಅವರ ಪಾರ್ಥೀವ ಶರೀರಗಳನ್ನು ಬೆಂಗಳೂರಿಗೆ ತರಲಾಗಿದೆ. ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಪ್ರತಾಪ್‌ ಗೌಡ, ಎಚ್‌.ಎಸ್‌. ನಟರಾಜ್‌, ಶಂಕರ್‌ಗೌಡ, ಕೆ. ಸುಧೀರ್‌ ಅವರ ಮೃತದೇಹಗಳು ಸದ್ಯ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಆಗಮಿಸಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ ಆಂಬುಲೆನ್ಸ್ ಮೂಲಕ ಅವರವರ ಊರುಗಳಿಗೆ ರವಾನಿಸಲಾಯಿತು. ಬೆಳಗಾವಿಯ ಸಿ.ಸಿ.ಬಿ ಇನ್ಸ್‌ಪೆಕ್ಟರ್ ಆಗಿದ್ದ ಅರುಣ್ ಸಾಲುಂಕೆ ಅವರ ಮೃತದೇಹವನ್ನು ನೇರವಾಗಿ ಬೆಳಗಾವಿಗೆ ರವಾನಿಸಲಾಗಿದೆ.

ಐವರು ಸ್ನೇಹಿತರು ಪ್ರವಾಸಕ್ಕೆಂದು ತೆರಳಿದ್ದು, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ದುರಂತಕ್ಕೆ ಬಲಿಯಾಗಿದ್ದರು. ಮೃತದೇಹಗಳು ಗುರುತು ಸಿಗದಂತಾಗಿತ್ತು. ಇಂದು ವಿವಿಧ ಸ್ಥಳಗಳಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ. ಹುಲಿಯೂರು ದುರ್ಗದ ಶಂಕರೇಗೌಡ ಅವರ ಅಂತ್ಯಕ್ರಿಯೆ ಹಕ್ಕಿಮರಿಪಾಳ್ಯದಲ್ಲಿ ಬೆಳಗ್ಗೆ 8 ಗಂಟೆಗೆ, ಹಳಿಯೂರಿನಲ್ಲಿ ನಟರಾಜ್ ಅವರ ಅಂತ್ಯಕ್ರಿಯೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಹಾಸನದ ಬಾಚಿಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಪ್ರತಾಪ್ ಗೌಡ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

Must Read