ಹೊಸದಿಗಂತ ವರದಿ ಬದಿಯಡ್ಕ:
ಪೆರಡಾಲ ನವಜೀವನ ಶಾಲೆಯಲ್ಲಿ ಆರಂಭಗೊಂಡ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಶಾಲಾ ಅಧ್ಯಾಪಕ ವೃಂದದವರು ಪ್ರಸ್ತುತಪಡಿಸಿದ ಸ್ವಾಗತ ಗೀತೆಯು ವಿಶೇಷ ಗಮನ ಸೆಳೆಯಿತು.
ನಾನಾ ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡಿನ ಹಿನ್ನೆಲೆಗೆ ತಕ್ಕಂತೆ ಕನ್ನಡ, ಮಲಯಾಳ ಹಾಗೂ ತುಳು ಭಾಷೆಗಳನ್ನೊಳಗೊಂಡ ಭಾವಪೂರ್ಣ ಸ್ವಾಗತ ಗೀತೆಯನ್ನು ರಚಿಸಿ ವೇದಿಕೆಯಲ್ಲಿ ಅಧ್ಯಾಪಕರು ರಾಗಬದ್ಧವಾಗಿ ಪ್ರಸ್ತುತಪಡಿಸಿದರು.
ವಿಶೇಷವಾಗಿ, ಗೀತೆಯಲ್ಲಿ ರಾಷ್ಟ್ರಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಪ್ರಸಿದ್ಧ “ಐಕ್ಯವೊಂದೇ ಮಂತ್ರ” ಕವನದ ಸಾಲುಗಳೂ ಒಳಗೊಂಡಿದ್ದು, ಸಭಿಕರ ದೇಶಪ್ರೇಮ ಹಾಗೂ ಭಾಷಾ ಪ್ರೀತಿಯನ್ನು ಇಮ್ಮಡಿಗೊಳಿಸಿತು.



