November 3, 2026
Tuesday, November 3, 2026
spot_img

ಅಭಿಮಾನಿಗಳ ಪ್ರೀತಿಗೆ ಕರಗಿದ ಶಾರುಖ್‌ ಖಾನ್‌ : ಬಾಲ್ಕನಿಯಲ್ಲಿ ಐಕಾನಿಕ್‌ ಪೋಸ್‌ ಕೊಟ್ಟ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ನಟ ಶಾರುಖ್‌ ಖಾನ್‌ ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷವೂ ಶಾರುಖ್‌ ತಮ್ಮ ಬಾಲ್ಕನಿ ಬಳಿ ನಿಂತು ಕೆಳಗಿರುವ ಲಕ್ಷಾಂತರ ಅಭಿಮಾನಿಗಳತ್ತ ಕೈ ಬೀಸುತ್ತಾರೆ. ಇದನ್ನು ಕಣ್ತುಂಬಿಕೊಳ್ಳಲು ಮುಂಬೈನಲ್ಲಿರುವ ಶಾರುಖ್‌ ಮನೆಯ ಮುಂದೆ ಅಭಿಮಾನಿಗಳು ನೆರೆದಿರುತ್ತಾರೆ. ನಿನ್ನೆ ಶಾರುಖ್‌, ಶೂಟ್‌ ಹಾಗೂ ಪ್ರಮೋಷನ್ಸ್‌ನಲ್ಲಿ ಬ್ಯುಸಿ ಇದ್ದ ಕಾರಣ ಮನೆಗೆ ಬಂದಿರಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡರೂ ಶಾರುಖ್‌ ಬಂದೇ ಬರುತ್ತಾರೆ ಎಂದು ಕಾಯುತ್ತಾ ನಿಂತಿದ್ದರು.

ಅಂತೆಯೇ ಶಾರುಖ್‌ ತಡವಾದರೂ ಪರವಾಗಿಲ್ಲ ಅಭಿಮಾನಿಗಳಿಗೆ ಮುಖ ತೋರಿಸುತ್ತೇನೆ ಎಂದು ಬಾಲ್ಕನಿ ಬಳಿ ಆಗಮಿಸಿದ್ದಾರೆ. ತಮ್ಮ ಐಕಾನಿಕ್‌ ಪೋಸ್‌ ಮೂಲಕ ಜನರನ್ನು ಸಂತಸಪಡಿಸಿದ್ದಾರೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಜನ್ಮದಿನವನ್ನು ಸೆಲೆಬ್ರೇಟ್‌ ಮಾಡಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಶಾರುಖ್‌ ಮನೆಯ ಮುಂದೆ ಜಮಾಯಿಸಿದ ಫ್ಯಾನ್ಸ್‌, ನಟನ ಪ್ರೀತಿಗೆ ಸಾಕ್ಷಿಯಾಗಿದೆ.

ಡಿಸೆಂಬರ್‌ನಲ್ಲಿ ಶಾರುಖ್‌ ಖಾನ್‌ ತಮ್ಮ ಕಿಂಗ್‌ ಸಿನಿಮಾ ಮೂಲಕ ದೊಡ್ಡಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಶಾರುಖ್‌ ಮನ್ನತ್‌ನ ಗ್ಯಾಲರಿಯಲ್ಲಿ ಆಗಮಿಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಶಾರುಖ್ ಖಾನ್ ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರೊಂದಿಗೆ ಮುಂಬೈನ ಹೋಟೆಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೂ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಅವರು ನಿರಾಶೆಗೊಳಿಸಲಿಲ್ಲ. ವೈಟ್ ಟೀ-ಶರ್ಟ್ ಹಾಗೂ ನೀಲಿ ಜೀನ್ಸ್ ಧರಿಸಿ ಅಭಿಮಾನಿಗಳತ್ತ ಫ್ಲೈಯಿಂಗ್ ಕಿಸ್ ನೀಡಿದರು. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಸುಂದರ ಕ್ಷಣದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Must Read