November 12, 2026
Thursday, November 12, 2026
spot_img

ಇನ್ನು ನಾಲ್ಕೈದು ತಿಂಗಳಷ್ಟೇ ಹೃದಯ ಗಟ್ಟಿ ಮಾಡ್ಕೊ: ಪವಿತ್ರಾ ಗೌಡಗೆ ಧೈರ್ಯ ಕೊಟ್ಟ ನಟ ದರ್ಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ್ದು, ಇವರ ಮಾತುಕತೆ ಸುದ್ದಿ ವೈರಲ್‌ ಆಗಿದೆ.

ಕೋರ್ಟ್‌ ವಿಚಾರಣೆ ವೇಳೆ ನಡೆದ ಕಾನ್ಫರೆನ್ಸ್‌ನಲ್ಲಿ ಪರಸ್ಪರ ಮಾತುಕತೆ ನಡೆಸಿದ್ದು, ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ದರ್ಶನ್‌ ಅವರನ್ನು ಸುಬ್ಬು ಎಂದು ಕರೆದಿರುವ ಪವಿತ್ರಾ, ಆರೋಗ್ಯ ಹೇಗಿದೆ? ಬೆನ್ನು ನೋವು ಕಡಿಮೆ ಆಯ್ತಾ? ಊಟ ಮಾಡಿದ್ಯಾ? ಫಿಸಿಯೋಥೆರಪಿ ಇನ್ನೆಷ್ಟು ದಿನ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್‌ ಉತ್ತರ ನೀಡಿದ್ದು, ಬೆನ್ನು ಮುರಿದುಹೋದಂತೆ ಅನ್ನಿಸುತ್ತಿದೆ. ತುಂಬಾ ನೋವು, ಫಿಸಿಯೋಥೆರಪಿ ಆಗ್ತಾ ಇದೆ. ಒಂದು ಸೆಷನ್‌ ಅಷ್ಟೇ ಆಗಿರೋದು ಇನ್ನೂ ತುಂಬಾ ಸಲ ಮಾಡಿಸಬೇಕಾಗಬಹುದು ಎಂದಿದ್ದಾರೆ.

ತದನಂತರ ಪವಿತ್ರಾ ಗೌಡ, ನನಗೆ ಜೈಲು ಇಷ್ಟವಾಗುತ್ತಿಲ್ಲ. ಇನ್ನೂ ಎಷ್ಟು ದಿನ ಈ ನರಕದಲ್ಲಿ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್‌ ಇನ್ನೂ ನಾಲ್ಕೈದು ತಿಂಗಳಾಗಬಹುದು. ಇಷ್ಟು ದಿನವೇ ಇದ್ದೀಯ, ಸ್ವಲ್ಪ ಮನಸ್ಸು ಗಟ್ಟಿ ಮಾಡ್ಕೊಂಡು ಜೀವನ ನಡೆಸಿಬಿಡು ಎಂದಿದ್ದಾರೆ ಎನ್ನಲಾಗಿದೆ.

Must Read