November 26, 2026
Thursday, November 26, 2026
spot_img

ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಆರೋಗ್ಯ ಇಲಾಖೆ ನಡೆಯತ್ತೆ: ಸಚಿವ ಯು.ಟಿ.ಖಾದರ್ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಶಾ ಕಾರ್ಯಕರ್ತೆಯರ ಸೇವೆ ಇಲ್ಲ ಎಂದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಗರಂ ಆಗಿದ್ದಾರೆ.

ಮಾಸಿಕ ವೇತವನ್ನು 15 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿ ಎಂದು ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರು ಮಾತನಾಡಿದ್ದು, ನರ್ಸ್‌ಗಳಿಗೆ ಹತ್ತು ಸಾವಿರ ರೂಪಾಯಿ ಸಂಬಳ, ಅತಿಥಿ ಶಿಕ್ಷಕರಿಗೆ 12 ಸಾವಿರ ರೂಪಾಯಿ ಸಂಬಳ. ಹೀಗಿರುವಾಗ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ಕೊಡೋಕೆ ಹೇಗಾಗತ್ತೆ ಎಂದು ಪ್ರಶ್ನಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಹತ್ತು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಕೆಲಸ ಮಾಡೋರೆಲ್ಲಾ ಬೆಂಗಳೂರಿನಲ್ಲೇ ಇದ್ದಾರೆ. ಆದರೆ ಕೆಲಸ ನಡೆಯುತ್ತಿದೆ ಅಲ್ವಾ? ಆರೋಗ್ಯ ಇಲಾಖೆಯಲ್ಲಿ ಯಾವ ಸಮಸ್ಯೆಯೂ ಇಲ್ಲ. ಹಳ್ಳಿಗಳಲ್ಲೂ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಕೆಲಸ ನಡೆಯುತ್ತದೆ ಅನ್ನೋದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಪ್ರತಿಭಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಎಂದಿದ್ದಾರೆ.

ತಮಿಳುನಾಡಿನಲ್ಲಿ ಕಾರ್ಯಕರ್ತರು ಇಲ್ಲ. ಆದರೂ ಅಲ್ಲಿ ತಾಯಿ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಕಾರ್ಯಕರ್ತರು ಇದ್ದಾರೆ. ಅಲ್ಲಿ ಆಶಾ ಕಾರ್ಯಕರ್ತೆ ಇಲ್ಲ. ಅಂದರೂ ಎಲ್ಲಾ ಚೆನ್ನಾಗಿದೆ ಅಲ್ವ ಎಂದು ಪ್ರಶ್ನಿಸಿದ್ದಾರೆ.ನರ್ಸ್‌ಗಳಿಗೆ 10 ಸಾವಿರ ಸಂಬಳ, ಶಿಕ್ಷಕರಿಗೆ 12 ಸಾವಿರ ಸಂಬಳ, ಆರೋಗ್ಯ ಸಹಾಯಕರಿಗೆ 4,500 ರೂ. ಸಂಬಳ. ಇವರಿಗೆ 15 ಸಾವಿರ ಕೊಡಬೇಕಾ ಎಂದು ಕೇಳಿದ್ದಾರೆ.

Must Read