ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2025 ರಲ್ಲಿ ಭಾರತದ ಟೀಮ್ ಇಂಡಿಯಾ ಮತ್ತು ಓಮನ್ ತಂಡದ ನಡುವಿನ ಪಂದ್ಯ ಮುಕ್ತಾಯಗೊಂಡ ನಂತರ, ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಒಮಾನಿ ಆಟಗಾರರೊಂದಿಗೆ ಸಂವಾದ ನಡೆಸಿದರು. ಮೊದಲ ದಿನದಲ್ಲಿ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದ ಸೂರ್ಯ, ಈ ಪಂದ್ಯದಲ್ಲಿ ಒಮನ್ ತಂಡದ ಆಟಗಾರರೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿದರು. ವಿಶೇಷವಾಗಿ, ಓಮನ್ ತಂಡದಲ್ಲಿ ಕೆಲ ಪಾಕಿಸ್ತಾನಿ ಆಟಗಾರರು ಕೂಡ ಇದ್ದರು.
ಭಾರತ-ಓಮನ್ ಪಂದ್ಯದ ನಂತರ ಒಮಾನಿ ಆಟಗಾರರು ಸೂರ್ಯ ಅವರನ್ನು ಸುತ್ತುವರೆದು ಸಲಹೆಗಳನ್ನು ಪಡೆದರು. ಅವರು ಟಿ20 ಕ್ರಿಕೆಟ್‌ನಲ್ಲಿ ಹೇಗೆ ಆಡಬೇಕು ಎಂಬುದಾಗಿ ಮಾರ್ಗದರ್ಶನ ಪಡೆದ ನಂತರ, ಭಾರತೀಯ ನಾಯಕನನ್ನು ಶ್ಲಾಘಿಸಿದರು ಮತ್ತು ಫೋಟೋಗಳಿಗಾಗಿ ಸಾಲುಗಟ್ಟಿ ನಿಂತರು. ಓಮನ್ ನಾಯಕ ಜತಿಂದರ್ ಸಿಂಗ್, “ಸೂರ್ಯಕುಮಾರ್ ಬಂದು ನಮ್ಮ ಆಟಗಾರರೊಂದಿಗೆ ಮಾತನಾಡಿದ್ದು ನನಗೆ ತುಂಬಾ ಸಂತೋಷ ತಂದಿದೆ. ಅವರು ನಮ್ಮ ಆಟಗಾರರಿಗೆ ಮಾರ್ಗದರ್ಶನ ನೀಡಿದರು ಮತ್ತು ನಮ್ಮ ತಂಡದ ಅಭ್ಯಾಸಕ್ಕೆ ಪ್ರೇರಣೆ ನೀಡಿದರು” ಎಂದರು.
ಈ ಸಂದರ್ಭ ಓಮನ್ ನಾಯಕ ಜತಿಂದರ್ ಸಿಂಗ್, ತಮ್ಮ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ತರಬೇತಿ ಪಡೆಯಲು ಅವಕಾಶ ನೀಡಲು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಅವರು ತಮ್ಮ ತಂಡದ ಕೌಶಲ್ಯ, ಫಿಟ್ನೆಸ್ ಮತ್ತು ಮಾನಸಿಕ ಸಿದ್ಧತೆಗೆ ಹೆಚ್ಚು ಶ್ರಮ ಹರಿಸಲು ಅವಕಾಶ ಸಿಕ್ಕರೆ, ಇದು ತಂಡವನ್ನು ಸುಧಾರಿಸಲು ಸಹಾಯಕವಾಗಲಿದೆ ಎಂದು ಹೇಳಿದರು.