ಮನೆ ಕಟ್ಟುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಆ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸಲು ಹಲವಾರು ಜನರು ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಅರಿಯದೆ ತರುವ ಕೆಲವು ವಸ್ತುಗಳು ಅಥವಾ ತಪ್ಪಾದ ಜಾಗದಲ್ಲಿ ಇಡುವ ಸಾಮಾನುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸಲು ಕಾರಣವಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದ ಆರೋಗ್ಯ ಸಮಸ್ಯೆ, ಕುಟುಂಬ ಕಲಹಗಳು ಹಾಗೂ ಆರ್ಥಿಕ ತೊಂದರೆಗಳೂ ಎದುರಾಗಬಹುದು.
ಕೆಟ್ಟ ಗಡಿಯಾರಗಳು: ಸರಿಯಾಗಿ ಸಮಯ ತೋರಿಸದ ಗಡಿಯಾರಗಳನ್ನು ಮನೆಯಲ್ಲಿ ಇಡುವುದು ಅಶುಭ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಕುಟುಂಬದಲ್ಲಿ ಜಗಳಗಳಿಗೆ ಕಾರಣವಾಗುತ್ತದೆ.

ಯುದ್ಧದ ಚಿತ್ರಗಳು: ಮಹಾಭಾರತ ಅಥವಾ ರಾಮಾಯಣದ ಯುದ್ಧ ದೃಶ್ಯಗಳ ಫೋಟೋಗಳನ್ನು ಮನೆಯಲ್ಲಿ ಇಡುವುದರಿಂದ ಕಲಹ, ಸಂಬಂಧಗಳಲ್ಲಿ ಅಸಮಾಧಾನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಅಕ್ವೇರಿಯಂ ದಿಕ್ಕು: ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಶ್ರೇಷ್ಠ. ಆದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಅಶುಭ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಉತ್ತಮ ಫಲ ಸಿಗುತ್ತದೆ.

ದೊಡ್ಡ ದೇವತೆಗಳ ವಿಗ್ರಹಗಳು: ಬಹಳ ಎತ್ತರದ, ದೊಡ್ಡ ಗಾತ್ರದ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಶ್ರೇಷ್ಠವಲ್ಲ. ಇದು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.
ಮನಿ ಪ್ಲಾಂಟ್: ಮನಿ ಪ್ಲಾಂಟ್‌ನ್ನು ಮನೆಯ ಮುಂದೆ ಬಳ್ಳಿಯಂತೆ ಬೆಳೆಯಲು ಬಿಡುವುದು ಶುಭ. ಆದರೆ ಮನೆಯ ಬೇರೆ ಭಾಗದಲ್ಲಿ ಇಡುವುದು ಸೂಕ್ತವಲ್ಲ. ಇದರಿಂದ ಆರ್ಥಿಕ ಸ್ಥಿರತೆ ಬರುವುದಾಗಿ ನಂಬಲಾಗಿದೆ.
ಕತ್ತಲೆ: ಮನೆಯಲ್ಲಿ ಬೆಳಕು ಸದಾ ಪ್ರಕಾಶಮಾನವಾಗಿರಬೇಕು. ಕತ್ತಲೆ ಹೆಚ್ಚಾದರೆ ಅಶುಭ ಪರಿಣಾಮ ಉಂಟಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
