ಹೊಸದಿಗಂತ ವರದಿ, ತುಮಕೂರು (ಪಾವಗಡ) :
ತಾನು ಹೆತ್ತ ಇಬ್ಬರು ಮಕ್ಕಳನ್ನು ಕತ್ತು ಕೊಯ್ದು ಕೊಲೆ ಮಾಡಿ ತಾಯಿಯೂ ನೇಣಿಗೆ ಶರಣಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪಲಕೆರೆ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ಸರಿತಾ(25) ಎಂದು ಗುರ್ತಿಸಲಾಗಿದ್ದು, ತನ್ನ 4 ವರ್ಷದ ಮಗ ಕುಶ್ವಿಕ್ ಹಾಗೂ ಒಂದು ವರ್ಷದ ಹೆಣ್ಣು ಮಗು ಘಟನೆಯಲ್ಲಿ ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದ ಸರಿತಾ, ಅದೇ ಗ್ರಾಮದ ವಾಸಿ ಸಂತೋಷ್ ಎಂಬುವರೊಂದಿಗೆ 6 ವರ್ಷಗಳ ಹಿಂದೆ ವಿವಾಹವಾಗಿದ್ದರು, ಕೌಟುಂಬಿಕ ಹಲಹದಿಂದ ಘಟನೆ ನಡೆದಿರಬಹುದು ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ.
ಘಟನೆ ತಿಳಿದು ಪಾವಗಡ ಠಾಣೆಯ ಸಿಪಿಐ ಸುರೇಶ್, ಡಿವೈಎಸ್‍ಪಿ ಮಂಜುನಾಥ್ ಸ್ಥಳಕ್ಕೆ ಭೆಟಿ ನೀಡಿ ಪರಿಶಿಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.