Sunday, September 21, 2025

ಅಮೆರಿಕ ‘H1-B ವೀಸಾ’ ಶುಲ್ಕ ಹೆಚ್ಚಳಕ್ಕೆ ಭಾರತ ಮೊದಲ ರಿಯಾಕ್ಷನ್: ಮಾನವೀಯ ಪರಿಣಾಮಗಳ ಕುರಿತು ಕಳವಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ H1-B ವೀಸಾ ಶುಲ್ಕವನ್ನು ವಾರ್ಷಿಕ 100,000 ಡಾಲರ್‌ಗೆ ಹೆಚ್ಚಿಸುವ ನಿರ್ಧಾರದ ಬಗ್ಗೆ ಭಾರತ ಸರ್ಕಾರವು ಗಂಭೀರ ಕಳವಳ ವ್ಯಕ್ತಪಡಿಸಿದೆ. ಮಾನವೀಯತೆಯ ಆಧಾರದ ಮೇಲೆ ಈ ಪ್ರಕರಣವನ್ನು ಪರಿಗಣಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ.

ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ; ‘ಅಮೆರಿಕ ಎಚ್1ಬಿ ವೀಸಾ ಕಾರ್ಯಕ್ರಮದ ಮೇಲೆ ಪ್ರಸ್ತಾವಿತ ನಿರ್ಬಂಧಗಳಿಗೆ ಸಂಬಂಧಿಸಿದ ವರದಿಗಳನ್ನು ಸರ್ಕಾರವು ಗಮನಿಸಿದೆ. ಇದು ಅಮೆರಿಕದಲ್ಲಿರುವ ನುರಿತ ಭಾರತೀಯ ವೃತ್ತಿಪರರು ಮತ್ತು ಅವರ ಕುಟುಂಬಗಳ ಮೇಲೆ ಸಂಭಾವ್ಯ ಅಡಚಣೆಯನ್ನು ಉಂಟುಮಾಡಬಹುದು. ಭಾರತ ಸರ್ಕಾರವು ಈ ನಿರ್ಧಾರದ ಪೂರ್ಣ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ. ಅಮೆರಿಕದಲ್ಲಿನ ಈ ನಿರ್ಧಾರವು ಭಾರತೀಯ ಕುಟುಂಬಗಳ ಮೇಲೆ ಉಂಟುಮಾಡುವ ಮಾನವೀಯ ಪರಿಣಾಮಗಳ ಬಗ್ಗೆಯೂ ಭಾರತ ಸರ್ಕಾರ ಗಮನ ಸೆಳೆದಿದೆ. ಈ ಅಡಚಣೆಗಳನ್ನು ಅಮೆರಿಕದ ಅಧಿಕಾರಿಗಳು ಸೂಕ್ತವಾಗಿ ಪರಿಹರಿಸುತ್ತಾರೆ ಎಂದು ಸರ್ಕಾರ ಆಶಿಸಿದೆ.

ಭಾರತೀಯ ಮತ್ತು ಅಮೆರಿಕದ ಕೈಗಾರಿಕೆಗಳು, ಎರಡೂ ದೇಶಗಳಲ್ಲಿನ ನಾವೀನ್ಯತೆ ಮತ್ತು ಸೃಜನಶೀಲತೆಯಲ್ಲಿ ಪಾಲುದಾರರಾಗಿದ್ದು, ಮುಂದಿನ ಹಾದಿಯ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದೆ.ನೈಪುಣ್ಯ ಚಲನಶೀಲತೆ ತಂತ್ರಜ್ಞಾನ ಅಭಿವೃದ್ಧಿ, ನಾವೀನ್ಯತೆ, ಆರ್ಥಿಕ ಬೆಳವಣಿಗೆ, ಸ್ಪರ್ಧಾತ್ಮಕತೆ ಮತ್ತು ಎರಡೂ ದೇಶಗಳಲ್ಲಿ ಸಂಪತ್ತು ಸೃಷ್ಟಿಗೆ ಅಪಾರ ಕೊಡುಗೆ ನೀಡಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ