ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದರೆ, ಸೌದಿ ಅರೇಬಿಯಾ ಪಾಕಿಸ್ತಾನವನ್ನು ರಕ್ಷಿಸುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೊಂಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖವಾಜಾ ಆಸಿಫ್, ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದರೆ, ಖಂಡಿತವಾಗಿಯೂ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಬೆಂಬಲ ನೀಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಒಪ್ಪಂದದ ಮಹತ್ವವೇ ಇದೇ ಆಗಿದೆ. ಒಪ್ಪಂದ ರಾಷ್ಟ್ರಗಳ ಮೇಲೆ ದಾಳಿಯಾದರೆ, ಸಂಘಟಿತವಾಗಿ ಪ್ರತಿದಾಳಿ ನಡೆಸಲಿದೆ. ಸಂಘಟಿತ ಡಿಫೆನ್ಸ್ ಒಪ್ಪಂದ ಇದಾಗಿದೆ. ಒಬ್ಬರು ನಮ್ಮ ಮೇಲೆ ದಾಳಿ ನಡೆಸಿದರೆ, ಪ್ರತಿಯಾಗಿ ಒಪ್ಪಂದ ರಾಷ್ಟ್ರಗಳು ಒಟ್ಟಾಗಿ ಪ್ರತಿದಾಳಿ ನಡೆಸಲಿದೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ.
ಸೌದಿ ಅರೆಬಿಯಾ ಹಾಗೂ ಪಾಕಿಸ್ತಾನದ ನಡುವಿನ ಡಿಫೆನ್ಸ್ ಪ್ಯಾಕ್ಟ್ ಡೀಲ್ , ನ್ಯಾಟೋ ರೀತಿಯಲ್ಲಿ ಪ್ರವರ್ತಿಸಲಿದೆ. ಹೀಗಾಗಿ ಸೌದಿ ಅರೆಬಿಯಾ ಅಥವಾ ಪಾಕಿಸ್ತಾನ ಮೇಲೆ ದಾಳಿಯಾದರೆ ಎರಡು ದೇಶ ಸಂಘಟಿತವಾಗಿ ಪ್ರತಿದಾಳಿ ನಡೆಸಲಿದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಬಲ ಹೆಚ್ಚಲಿದೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ.