Sunday, September 21, 2025

ದಿನಭವಿಷ್ಯ: ಮಹಾಲಯ ಅಮಾವಾಸ್ಯೆ ದಿನ ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿದುಕೊಳ್ಳಿ

ಮೇಷ
ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಹಣ ಹೂಡಿಕೆಯಿಂದ ಲಾಭ. ಬಂಧುಮಿತ್ರರ ಭೇಟಿ.    
ವೃಷಭ
ನಿಮ್ಮೆಡೆಗೆ ಬರುವ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಆರ್ಥಿಕ ಲಾಭ. ಖಾಸಗಿ ಬದುಕಿನ ಸಮಸ್ಯೆ ಇಂದು ಪರಿಹಾರ ಕಾಣುವುದು.  
ಮಿಥುನ
  ಮನೆಯಲ್ಲಿ ಭಿನ್ನಮತ ಉಂಟಾದೀತು. ಅದನ್ನು ಸೌಹಾರ್ದದಿಂದ ಪರಿಹರಿಸಿಕೊಳ್ಳಿ. ಹಣದ ಹರಿವಿನಲ್ಲಿ  ತುಸು ತೊಡಕು ಉಂಟಾದೀತು.
ಕಟಕ
 ನಿಮ್ಮ ಪ್ರಯತ್ನಕ್ಕೆ ಕೆಲವರ ಅಡ್ಡಿ. ಅದರಿಂದ ನಿರೀಕ್ಷಿತ -ಲ ಪಡೆಯಲಾರಿರಿ. ಪ್ರೀತಿಯ  ವ್ಯವಹಾರದಲ್ಲಿ ಶುಭ ಬೆಳವಣಿಗೆ ಕಾಣುವಿರಿ.    
ಸಿಂಹ
ಬರಲು ಬಾಕಿ ಇರುವ ಹಣ ಇಂದು ಸಂದಾಯವಾಗಲಿದೆ. ಪ್ರೀತಿಪಾತ್ರರ ಸಂಗದಲ್ಲಿ ಕಾಲಕ್ಷೇಪ. ಆಹಾರದಲ್ಲಿ ಹಿತಮಿತವಿರಲಿ.  
ಕನ್ಯಾ
ನಿಮ್ಮ ಗುರಿಯಿಂದ ವಿಚಲಿತರಾಗದಿರಿ. ಕೆಲವು ಪ್ರಸಂಗ ನಿಮ್ಮ ಚಿತ್ತ ಕದಡಿಸಬಹುದು. ದೈಹಿಕ ಕ್ಷಮತೆ ಕಾಯಲು ಹೆಚ್ಚಿನ ಗಮನ ಕೊಡಿ.    
ತುಲಾ
ವೃತ್ತಿ ಸಂಬಂಽತ ಪ್ರಯಾಣ. ವೆಚ್ಚದಲ್ಲಿ ಅಹಿತ ಬೆಳವಣಿಗೆ. ತುಸು ಒತ್ತಡ ಎದುರಿಸುವಿರಿ. ಕೆಲವರಿಗೆ ಚರ್ಮದ ಅಲರ್ಜಿ ಉಂಟಾದೀತು.  
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಕುಟುಂಬದ ಬೆಂಬಲ. ಅದರಿಂದ ನಿಮಗೆ ನಿರಾಳತೆ. ಹಣದ ಬಿಕ್ಕಟ್ಟು ಪರಿಹಾರ ಕಾಣಲಿದೆ. ಬಂಧುಗಳ ಭೇಟಿ.  
ಧನು
ನಿಮ್ಮ ಕೆಲಸವಾಗಲು ಹೆಚ್ಚುವರಿ ಶ್ರಮ ಅಗತ್ಯ. ಪದೇಪದೇ ಅಡ್ಡಿ. ಸಂಗಾತಿಯ ಜತೆಗೆ ಹೊಂದಾಣಿಕೆ ಸಾಽಸಿ. ವಾಗ್ವಾದ ನಡೆಸದಿರಿ.
ಮಕರ
ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಳೆಯ ಸಂಬಂಧವೊಂದು ಮತ್ತೆ ಕೂಡಿಕೊಳ್ಳಬಹುದು. ಆರ್ಥಿಕ ಉನ್ನತಿ.          
ಕುಂಭ
ಪ್ರತಿಕೂಲ ಸನ್ನಿವೇಶ ಎದುರಾದರೂ ಸ್ಥೈರ್ಯ ಕಳಕೊಳ್ಳಬೇಡಿ. ಏಕೆಂದರೆ ಅಂತಿಮವಾಗಿ ನಿಮಗೇನೂ ಹಾನಿ ತಟ್ಟದು. ಒಳಿತೇ ಆಗಲಿದೆ.                    
 ಮೀನ
ಸಂಗಾತಿ ಜತೆಗಿನ ಮನಸ್ತಾಪ ತಪ್ಪಿಸಿ. ಕೆಲ ಸಂದರ್ಭಗಳಲ್ಲಿ ನೀವೇ ಬಾಗುವುದು ಒಳಿತು. ಆರ್ಥಿಕ ಪರಿಸ್ಥಿತಿ ಉತ್ತಮ. ಆರೋಗ್ಯ ಸಮಸ್ಯೆ.

ಇದನ್ನೂ ಓದಿ