ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ನವರಾತ್ರಿಯ ಮೊದಲ ದಿನವೇ ಆತ್ಮನಿರ್ಭಾರ ಭಾರತದತ್ತ ದೇಶ ದಾಪುಗಾಲಿಡಲಿದೆ. ನಾಳೆಯ ನವರಾತ್ರಿ ಮೊದಲ ದಿನದಿಂದ ಜಿಎಸ್ ಟಿ ಉತ್ಸವ ಆರಂಭವಾಗಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಹೊಸ ಜಿಎಸ್‌ಟಿ (GST) ದರಗಳು ಸೆಪ್ಟೆಂಬರ್ 22, ಸೋಮವಾರದಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಹಲವಾರು ಗ್ರಾಹಕ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿವೆ. ಈ ಕುರಿತು ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ನವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಜಿಎಸ್ಟಿಯಿಂದ ನಿಮ್ಮಲೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲಾ ವರ್ಗದ ಜನರಿಗೂ ಉಳಿತಾಯದ ಉತ್ಸವ ಆರಂಭವಾಗಲಿದೆ. ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ ಎಂದರು.
ನವರಾತ್ರಿಯ ಮೊದಲ ದಿನದಿಂದ ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು . ಇದು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.