ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಗುಜರಾತಿ ಮಹಿಳೆಯನ್ನು ಗುಂಡಿಕ್ಕಿ ಕೊಂದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ದಕ್ಷಿಣ ಕೆರೊಲಿನಾದ ಯೂನಿಯನ್ ಕೌಂಟಿಯ ಸೌತ್ ಮೌಂಟೇನ್ ಸ್ಟ್ರೀಟ್‌ನಲ್ಲಿರುವ ಚಾರ್ಲ್ಸ್ ನಾಥನ್ ಕ್ರಾಸ್ಬಿ ಮತ್ತು ಡಿಡಿಯ ಫುಡ್ ಮಾರ್ಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಸೆಪ್ಟೆಂಬರ್ 16 ರಂದು ಕಿರಣ್ ಪಟೇಲ್ (49) ಎಂಬವರ ಮೇಲೆ ಇಬ್ಬರು ವ್ಯಕ್ತಿಗಳು ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಶಂಕಿತನೊಬ್ಬನನ್ನು ಬಂಧಿಸಲಾಗಿದೆ.
ಕಿರಣ್ ಪಟೇಲ್ ಅವರು ನಿರ್ವಹಿಸುತ್ತಿದ್ದ ಗ್ಯಾಸ್ ಸ್ಟೇಷನ್-ಕಮ್-ಕನ್ವೀನಿಯನ್ಸ್ ಅಂಗಡಿಯ ರಿಜಿಸ್ಟರ್‌ನಲ್ಲಿ ಹಣವನ್ನು ಎಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ 21 ವರ್ಷದ ಜೈದನ್ ಮ್ಯಾಕ್ ಹಿಲ್ ಅವರನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 16 ರಂದು ರಾತ್ರಿ ದಕ್ಷಿಣ ಕೆರೊಲಿನಾದ ಯೂನಿಯನ್ ಕೌಂಟಿಯ ಸೌತ್ ಮೌಂಟೇನ್ ಸ್ಟ್ರೀಟ್‌ನಲ್ಲಿರುವ ಅಂಗಳದಲ್ಲಿ ಚಾರ್ಲ್ಸ್ ನಾಥನ್ ಕ್ರಾಸ್ಬಿ ಮತ್ತು ಡಿಡಿಯ ಫುಡ್ ಮಾರ್ಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಿರಣ್ ಪಟೇಲ್ ಅವರು ಪೆಟ್ರೋಲ್ ಬಂಕ್-ಕಮ್-ಕನ್ವೀನಿಯನ್ಸ್ ಅಂಗಡಿಯ ರಿಜಿಸ್ಟರ್‌ನಲ್ಲಿ ಹಣವನ್ನು ಎಣಿಸುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಭಾರತೀಯ ಮೂಲದ ಗುಜರಾತಿ ಮಹಿಳೆಯಾಗಿದ್ದ ಕಿರಣ್ ಪಟೇಲ್ ಮೇಲೆ ಪ್ಲಾಸ್ಟಿಕ್ ಬಾಟಲಿಯಂತ ವಸ್ತುಗಳನ್ನು ದರೋಡೆಕೋರರು ಎಸೆದು ಓಡಿಹೋದರು ಎಂದು ಗೋಫಂಡ್‌ಮಿಯಲ್ಲಿ ಪೋಸ್ಟ್ ಮಾಡಲಾಗಿದೆ.
ತಮ್ಮ ಜೀವ ಉಳಿಸಿಕೊಳ್ಳಲು ಪಾರ್ಕಿಂಗ್ ಸ್ಥಳದ ಕಡೆಗೆ ಓಡಿದ ಕಿರಣ್ ಪಟೇಲ್ ಅವರ ಮೇಲೆ ದರೋಡೆಕೋರನು ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಗಾಯಗೊಂಡ ಅವರು ಕೇವಲ ಇಪ್ಪತ್ತು ಅಡಿ ದೂರದಲ್ಲಿ ಹೋಗಿ ಬಿದ್ದಿದ್ದು, ಅಲ್ಲೇ ಸಾವನ್ನಪ್ಪಿದ್ದರು. ದಕ್ಷಿಣ ಕೆರೊಲಿನಾ ಕಾನೂನು ಜಾರಿ ವಿಭಾಗವು, ಎಸ್ ಡಬ್ಲ್ಯೂಎಟಿ ಮತ್ತು ಯೂನಿಯನ್ ಪಬ್ಲಿಕ್ ಸೇಫ್ಟಿ ಗುರುವಾರ ಜೈದನ್ ಮ್ಯಾಕ್ ಹಿಲ್ ನ ಬಂಧನಕ್ಕೆ ವಾರಂಟ್ ಹಿಡಿದು ಸೌತ್ ಚರ್ಚ್ ಸ್ಟ್ರೀಟ್‌ನಲ್ಲಿರುವ ಆತನ ನಿವಾಸಕ್ಕೆ ಆಗಮಿಸಿದೆ. ಈ ವೇಳೆ ಹಿಲ್ ಮತ್ತು ಅಧಿಕಾರಿಗಳ ನಡುವೆ ಹಲವಾರು ಗಂಟೆಗಳ ಕಾಲ ಘರ್ಷಣೆ ನಡೆಯಿತು. ಕೊನೆಗೆ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಯನ್ನು ಬಳಿಕ ಯೂನಿಯನ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದ್ದು,ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.