ಹೊಸದಿಗಂತ ವರದಿ,ತುಮಕೂರು:
ತಿಪಟೂರು ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರಿಘಟ್ಟ ಕ್ಷೇತ್ರದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ 33ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾಕಾರ್ಯಕ್ರಮಗಳು ಮತ್ತು ಅಲಂಕಾರ ಸೆ.22 ರಿಂದ ಅ.2ರವರಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.
ಸೆ.22ರ ಸೋಮವಾರ ಚೌಡೇಶ್ವರಿ ಹಾಗೂ ಕರಿಯಮ್ಮದೇವಿಯವರಿಗೆ ಅಭಿಷೇಕ, ಮಹಾಮಂಗಳಾರತಿ, ದೇವಿಪಾರಾಯಣ, ರಜತ ಕವಚ ಮತ್ತು ನಿಂಬೆಹಣ್ಣಿನ ಅಲಂಕಾರ, ಸೆ.23 ರಂದು ಅರಿಶಿನ ಅಲಂಕಾರ ಹಾಗೂ ಪುಪ್ಪಾಲಂಕಾರ, ಸೆ.24 ರಂದು ನವಧಾನ್ಯ ಹಾಗೂ ಬಳೆ ಅಲಂಕಾರ, ಸೆ.25 ರಂದು ವೀಳ್ಯದ ಎಲೆ ಅಲಂಕಾರ, ಸೆ.26 ರಂದು ಧನಲಕ್ಷ್ಮಿ ಅಲಂಕಾರ, ಸೆ.27 ರಂದು ಗಾಯತ್ರಿ ಹಾಗೂ ಹಿಮಗಿರಿವಾಸಿನಿ ಅಲಂಕಾರ, ಸೆ.28 ರಂದು ಕುಂಕುಮ ಹಾಗೂ ದುರ್ಗಾ ಅಲಂಕಾರ, ಸೆ.29 ರಂದು ಸರಸ್ವತಿ ಅಲಂಕಾರ, ಸೆ.30 ರಂದು ಮಹಾಕಾಳಿ ಹಾಗೂ ಮಹಿಷಾಸುರಮರ್ಧಿನಿ ಅಲಂಕಾರ, ಅ.1ರಂದು ಶಾಖಾಂಬರಿ ಅಲಂಕಾರ, ಅ.2 ರಂದು ಮುತ್ತಿನ ಅಲಂಕಾರ ಮಾಡಲಾಗುವುದು.
ಅ.2 ರ ಮಧ್ಯಾಹ್ನ 12 ಗಂಟೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಾಲಾನಂದನಾಥಸ್ವಾಮೀಜಿಯವರ ಸಾನಿಧ್ಯದೊಂದಿಗೆ ಶ್ರೀ ಚೌಡೇಶ್ವರಿ ದೇವಿಯವರ “ಮುಳ್ಳುಗದ್ದಿಗೆ ಉತ್ಸವ” ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಆಗಮಿಸಿ ದೇವಿಯವರ ಕೃಪೆ ಪಾತ್ರರಾಗಬೇಕೆಂದು ಕೋರಿದ್ದಾರೆ.