Monday, September 22, 2025

ಪಾಕಿಸ್ತಾನ ಸೇನೆಯ ವಾಹನಗಳ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿಯಿಂದ ರಾಕೆಟ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಲೂಚಿಸ್ತಾನ ಲಿಬರೇಷನ್ ಆರ್ಮಿ ಪಾಕಿಸ್ತಾನ ಸೇನೆಯ ವಾಹನಗಳ ಮೇಲೆ ಭೀಕರ ದಾಳಿ ನಡೆಸಿ ಕನಿಷ್ಟ 8 ಸೈನಿಕರನ್ನು ಕೊಂದು ಹಾಕಿದ್ದಾರೆ.

ಬಲೂಚಿಸ್ತಾನದಲ್ಲಿರುವ ಟಂಪ್ ಮತ್ತು ಝಮುರಾನ್‌ನ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ಬಿಎಲ್ಎ (BLA) ಐಇಡಿ ಮತ್ತು ರಾಕೆಟ್ ದಾಳಿ ಮಾಡಿದ್ದು ಈ ಭೀಕರ ದಾಳಿಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ವಕಾರ್ ಕಾಕರ್ ಸೇರಿದಂತೆ 8 ಸೈನಿಕರು ಹತರಾಗಿದ್ದಾರೆ.

ಈ ದಾಳಿಯ ವಿಡಿಯೋವನ್ನು ಸ್ವತಃ ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಸೇನೆಯ ವಾಹನ ಸ್ಫೋಟಗೊಂಡು ಅದರಲ್ಲಿದ್ದ ಸೈನಿಕರು ಗಾಳಿಯಲ್ಲಿ ಹಾರಿ ಛಿದ್ರಗೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ನು ಬಿಎಲ್ಎ ನಡೆಸಿದ ಈ ದಾಳಿ ಸೆಪ್ಟೆಂಬರ್ 15ರಂದು ಬಲೂಚಿಸ್ತಾನದಲ್ಲಿರುವ ಟಂಪ್ ಮತ್ತು ಝಮುರಾನ್‌ ಪ್ರದೇಶಗಳಲ್ಲಿ ನಡೆದ ದಾಳಿ ಎನ್ನಲಾಗಿದೆ. ಪಾಕಿಸ್ತಾನ ಸೈನಿಕರು ಸೇನಾವಾಹನದಲ್ಲಿ ತೆರಳುತ್ತಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ಬಿಎಲ್ಎ ಈ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.

https://x.com/MeghUpdates/status/1969415336027177128?ref_src=twsrc%5Etfw%7Ctwcamp%5Etweetembed%7Ctwterm%5E1969415336027177128%7Ctwgr%5Ef29e7224e5ecbae26c5d650086cf532f5c83c6cf%7Ctwcon%5Es1_&ref_url=https%3A%2F%2Fwww.kannadaprabha.com%2Fworld%2F2025%2FSep%2F21%2Fwatch-baloch-liberation-army-releases-video-of-coordinated-attacks-in-tump-and-zamuran

ಈ ದಾಳಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಎಲ್ಎ, ‘ತಾವು ನಡೆಸಿದ ಸಂಘಟಿತ ಸ್ಫೋಟದಲ್ಲಿ ಪಾಕಿಸ್ತಾನ ಸೇನೆಯ ಒಂಬತ್ತು ಸೈನಿಕರು ಹತರಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಆಕ್ರಮಿಸಿಕೊಳ್ಳಲು ಮುಂದಾದರೆ ಸಂಘಟಿತ, ಮಾರಕ ಮತ್ತು ಪರಿಣಾಮಕಾರಿ ಹಾನಿ”ಯನ್ನುಂಟುಮಾಡುತ್ತೇವೆ. ಇದು ಪಾಕಿಸ್ತಾನ ಸೇನೆ ವಿರುದ್ಧ ಬಿಎಲ್ಎ ಹೊಂದಿರುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಮುಂದೆಯೂ ಇದು ಮುಂದುವರೆಯುತ್ತದೆ ಎಂದು ಬಿಎಲ್ಎ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ