ಜೀವನದಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಅದು ಕೇವಲ ಪ್ರೀತಿಯಲ್ಲ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಗೌರವ ಮತ್ತು ಬೆಂಬಲದ ಮೇಲೆ ನಿಂತಿರುತ್ತದೆ. ಒಳ್ಳೆಯ ಸಂಬಂಧ ಕಟ್ಟಿಕೊಳ್ಳಲು ಸಂಗಾತಿಯ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳು ಮಹತ್ವದ ಪಾತ್ರ ವಹಿಸುತ್ತವೆ.
ಸಹಾನುಭೂತಿ
ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಕಷ್ಟದಲ್ಲಿ ಬೆಂಬಲಿಸುವ ಗುಣ ಸಂಗಾತಿಯಲ್ಲಿ ಇರಬೇಕು. ಸಹಾನುಭೂತಿ ಇರುವವರ ಜೊತೆ ನೀವು ಎಂದಿಗೂ ಏಕಾಂಗಿಯಾಗುವುದಿಲ್ಲ.

ಭಾವನಾತ್ಮಕ ಬುದ್ಧಿವಂತಿಕೆ
ಸಂಬಂಧದಲ್ಲಿ ಎದುರಾಗುವ ಸವಾಲುಗಳನ್ನು ಶಾಂತವಾಗಿ ನಿಭಾಯಿಸಲು ಹಾಗೂ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳಲು ಈ ಗುಣ ಮುಖ್ಯ.
ಪ್ರಾಮಾಣಿಕತೆ
ಸಂಬಂಧದ ಅಡಿಪಾಯ ಪ್ರಾಮಾಣಿಕತೆ. ಪ್ರಾಮಾಣಿಕ ಸಂಗಾತಿ ಎಂದಿಗೂ ಸುಳ್ಳು ಹೇಳುವುದಿಲ್ಲ ಮತ್ತು ನಿಮ್ಮ ವಿಶ್ವಾಸಕ್ಕೆ ಧಕ್ಕೆ ತರೋದಿಲ್ಲ.

ಗೌರವ
ನಿಮ್ಮ ಅಭಿಪ್ರಾಯ, ಕನಸುಗಳಿಗೆ ಗೌರವ ನೀಡುವ ಸಂಗಾತಿಯೊಂದಿಗೆ ಜೀವನ ಸುಗಮವಾಗುತ್ತದೆ. ಇದು ಆರೋಗ್ಯಕರ ಸಂಬಂಧದ ಮೂಲ ಅಂಶ.
ಹಾಸ್ಯಪ್ರಜ್ಞೆ
ಒಟ್ಟಿಗೆ ನಗುವ ಸಾಮರ್ಥ್ಯವು ಒತ್ತಡ ಕಡಿಮೆ ಮಾಡುತ್ತದೆ ಮತ್ತು ಸಂಬಂಧವನ್ನು ಇನ್ನಷ್ಟು ಹತ್ತಿರ ಮಾಡುತ್ತದೆ.
