January19, 2026
Monday, January 19, 2026
spot_img

ಭಾರತ–ಪಾಕ್ ಪಂದ್ಯದಲ್ಲಿ ಹೈ ಡ್ರಾಮಾ, ಕ್ಯಾತೆ ತೆಗೆದ ಹ್ಯಾರಿಸ್‌ ಬೆವರಿಳಿಸಿದ ಅಭಿಷೇಕ್ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಭಾರೀ ಜಿದ್ದಾಜಿದ್ದಿ ನಡೆಯಿತು. ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಸ್ಲೆಡ್ಜಿಂಗ್, ಮಾತಿನ ಚಕಮಕಿ, ಗನ್ ಸೆಲೆಬ್ರೇಷನ್ ಹಾಗೂ ಕ್ಯಾಚ್ ವಿವಾದ ಸೇರಿದಂತೆ ಹಲವು ಘಟನೆಗಳಿಂದ ಪಂದ್ಯ ರಣಾಂಗಣದಂತೆ ಮಾರ್ಪಟ್ಟಿತು.

ಭಾರತದ ಪರ ಆರಂಭಿಕ ಅಭಿಷೇಕ್ ಶರ್ಮಾ ಪಾಕಿಸ್ತಾನದ ಪ್ರಸಿದ್ಧ ಬೌಲರ್‌ಗಳನ್ನೇ ಬಿಗಿಯಾಗಿ ಎದುರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಪಾಕ್ ಬೌಲರ್‌ಗಳನ್ನು ಕೆರಳಿಸಿತು. ಇದರಿಂದ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಶಾ ಅಫ್ರಿದಿ ಮಾತಿನ ಕಟುವಿನಲ್ಲಿ ತೊಡಗಿದರು. ಆದರೆ ಅಭಿಷೇಕ್ ಶರ್ಮಾ ಹಿಂಜರಿಯದೆ ತಿರುಗೇಟು ನೀಡಿದರು. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆಯೇ ಅಂಪೈರ್ ಮಧ್ಯ ಪ್ರವೇಶಿಸಿ ಜಗಳ ಶಮನಗೊಳಿಸಿದರು.

ಇದಕ್ಕೆ ಜೊತೆಯಾದ ಶುಭ್‌ಮನ್ ಗಿಲ್ ಕೂಡ ಬೌಂಡರಿಗಳ ಮೂಲಕ ಪಾಕಿಸ್ತಾನ ಬೌಲರ್‌ಗಳಿಗೆ ಉತ್ತರಿಸಿದರು. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸತದಲ್ಲಿ ಬೌಂಡರಿ ಸಿಡಿಸಿದ ಗಿಲ್ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ತಗೊಂಡ್‌ ಬಾ ಅಂತ ವ್ಯಂಗ್ಯ ಮಾಡಿದರು. ಈ ಘಟನೆಗಳು ಪಂದ್ಯವನ್ನು ಇನ್ನಷ್ಟು ರೋಚಕತೆಗೆ ನೂಕಿತು.

ಪಂದ್ಯದ ಫಲಿತಾಂಶದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ, ಆರಂಭಿಕರ ಆರ್ಭಟ ಹಾಗೂ ಮಧ್ಯ ಕ್ರಮದ ಸ್ಥಿರ ಆಟದಿಂದ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

Must Read

error: Content is protected !!