ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಂಎಫ್ ಗ್ರಾಹಕರಿಗೆ ಸಿಹಿ ಸುದ್ದಿ. ಜಿಎಸ್‌ಟಿ ಪರಿಷ್ಕರಣೆಯಾದ ಬೆನ್ನಲ್ಲೇ ಇಂದಿನಿಂದಲೇ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಿದೆ. ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ.
ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ (ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ದರ ಕಡಿಮೆಯಾಗಿದೆ.
ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನಂತೆ ಮುಂದುವರಿಯಲಿದೆ.
ಯಾವ್ಯಾವ ಉತ್ಪನ್ನಗಳ ದರ ಇಳಿಕೆ?
ತುಪ್ಪ- ( 1000- ಮಿ.ಲಿ)
650 – ಹಳೆ ದರ
610 – ಈಗಿನ ದರ
ಬೆಣ್ಣೆ- 500 ಗ್ರಾಂ
ಹಳೆ ದರ – 305
ಹೊಸ ದರ – 286
ಪನ್ನೀರ್ – 1000 ಗ್ರಾಂ
ಹಳೆ ದರ – 425
ಹೊಸ – 408
ಗುಡ್ ಲೈಫ್ ಹಾಲು
ಹಳೆ ದರ – 70
ಹೊಸ ದರ – 68
ಸಂಸ್ಕರಿಸಿದ ಚೀಸ್
ಹಳೆ ದರ – 530
ಹೊಸ ದರ – 497
ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್
ಹಳೆ ದರ – 645
ಹೊಸ ದರ – 574
ಐಸ್‌ಕ್ರೀಮ್ ವೆನಿಲಾ ಟಬ್
ಹಳೆ ದರ – 200
ಹೊಸ ದರ – 178