Monday, September 22, 2025

ದಸರಾ ಉದ್ಘಾಟನೆ: ಚಾಮುಂಡಿ ತಾಯಿಗೆ ಬಾನು ಮುಷ್ತಾಕ್‌ರಿಂದ ಪುಷ್ಪಾರ್ಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಡ ಅಧಿದೇವತೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಹಿರಿಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಇಂದು ಬೆಳಿಗ್ಗೆ 10.10 ರಿಂದ 10.40 ರ ನಡುವೆ ಚಾಮುಂಡೇಶ್ವರಿ ದೇವಾಲಯದ ಹೊರಗೆ ಸ್ಥಾಪಿಸಲಾದ ವೇದಿಕೆಯಲ್ಲಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಕ್ಕೆ ಮುನ್ನುಡಿ ನೀಡಿದರು.

ಅವರ ಜೊತೆ ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್ ಸಿ ಮಹದೇವಪ್ಪ, ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿಗಳು, ಶಾಸಕರು ಹಾಜರಿದ್ದರು.

ಮೈಸೂರು ಅರಮನೆ ನಗರಿ ಮತ್ತೆ ಸಿಂಗಾರಗೊಂಡಿದ್ದು, ವಾರ್ಷಿಕ ದಸರಾ ಆಚರಣೆಯ ಉದ್ಘಾಟನೆಗೊಂಡಿದೆ. 10 ದಿನಗಳ ಈ ಉತ್ಸವದಲ್ಲಿ, 1610 ರಲ್ಲಿ ಪ್ರಾರಂಭವಾದ ನವರಾತ್ರಿ ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ನಗರವು ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ