January17, 2026
Saturday, January 17, 2026
spot_img

Walking | ವಯಸ್ಸಿಗೆ ತಕ್ಕಂತೆ ವಾಕಿಂಗ್ ಮಾಡಬೇಕು ಅನ್ನೋದು ನಿಮಗೆ ಗೊತ್ತಿದ್ಯಾ?

ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳ ಕೊರತೆ ಜನರ ಆರೋಗ್ಯಕ್ಕೆ ಗಂಭೀರ ತೊಂದರೆ ಉಂಟುಮಾಡುತ್ತಿದೆ. ಟಿವಿ ಮುಂದೆ ಗಂಟೆಗಳ ಕಾಲ ಕುಳಿತುಕೊಂಡು, ಸ್ಮಾರ್ಟ್‌ಫೋನ್ ಬಳಸಿ ಸಮಯವನ್ನು ಕಳೆಯುವ ರೀತಿಯ ಜೀವನಶೈಲಿ ಹೆಚ್ಚುತ್ತಿದೆ. ನಿತ್ಯ ವಾಕಿಂಗ್ ಅಥವಾ ನಡೆಯುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯ ಎಂದು ವೈದ್ಯರು ಎಚ್ಚರಿಸುತ್ತಾರೆ. ಸರಿಯಾದ ದೈಹಿಕ ಚಟುವಟಿಕೆ ಇಲ್ಲದಿದ್ದರೆ ಹೃದಯದ ಸಮಸ್ಯೆ, ಬೊಜ್ಜು, ಡಯಾಬಿಟೀಸ್ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಪ್ರತಿದಿನ ಕನಿಷ್ಠ 3 ಕಿಲೋ ಮೀಟರ್‌ ನಡೆದು, ಸುಮಾರು 30 ನಿಮಿಷವರೆಗೆ ಚುರುಕಾಗಿ ನಡೆಯುವುದು ಆರೋಗ್ಯಕ್ಕಾಗಿ ಸೂಕ್ತವಾಗಿದೆ. ವಿಶೇಷವಾಗಿ ಯುವಜನರು ಪ್ರತಿದಿನ ವ್ಯಾಯಾಮ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ ಶಿಫಾರಸು ಮಾಡಿದೆ.

60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದಿನಕ್ಕೆ 8,000–10,000 ಹೆಜ್ಜೆಗಳನ್ನುನಡೆಯಬೇಕು.

ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ 6,000–8,000 ಹೆಜ್ಜೆಗಳನ್ನು ನಡೆಯುವುದು ಆರೋಗ್ಯಕ್ಕೆ ಲಾಭದಾಯಕವಾಗಿದೆ.

6–17 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ ಕನಿಷ್ಠ 60 ನಿಮಿಷ ಚಟುವಟಿಕೆ ಮತ್ತು ಓಟವನ್ನು ಪಾಲಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.

Must Read

error: Content is protected !!