Monday, September 22, 2025

Smartphone | ಸ್ಮಾರ್ಟ್‌ಫೋನ್‌ನ ಈ ವಿಷಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿದ್ದು, ಫೋನ್ ಮಾತ್ರವಲ್ಲದೆ ವ್ಯವಹಾರ, ಸ್ಟೋರೇಜ್, ಮನರಂಜನೆ ಸೇರಿದಂತೆ ಅನೇಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಫೋನ್‌ ಬಳಕೆ ಹೆಚ್ಚಾದಂತೆ, ಬ್ಯಾಟರಿ ಚಾರ್ಜಿಂಗ್ ಮತ್ತು ಬಾಳಿಕೆ ಕುರಿತಾಗಿ ಬಳಕೆದಾರರಲ್ಲಿ ಅನೇಕ ಗೊಂದಲಗಳು ಹುಟ್ಟಿಕೊಂಡಿವೆ. ಕೆಲವೊಂದು ತಪ್ಪು ಕಲ್ಪನೆಗಳು ಫೋನ್ ಬ್ಯಾಟರಿಯ ಜೀವನಾವಧಿಗೆ ನಷ್ಟ ತರುತ್ತವೆ.

ಫೋನ್ 100% ಚಾರ್ಜ್ ಆಗಿದೆಯೇ?
ಬ್ಯಾಟರಿ ಶೇಕಡಾ 100 ರಷ್ಟಾದ ನಂತರ ಚಾರ್ಜ್ ಮಾಡುವ ಅಭ್ಯಾಸ ಕೆಲವರಿಗೆ ಇದೆ. ತಾಂತ್ರಿಕವಾಗಿ ಬ್ಯಾಟರಿ ಅದನ್ನು ಹಾಳುಮಾಡುವುದಿಲ್ಲ, ಆದರೆ ಇದನ್ನು ನಿಯಮಿತವಾಗಿ ಮಾಡುವುದು ಬ್ಯಾಟರಿ ಜೀವನಾವಧಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಉತ್ತಮ ಅಭ್ಯಾಸವೆಂದರೆ ಫೋನ್ ಸಂಪೂರ್ಣವಾಗಿ ಡಿಸ್ಚಾರ್ಜ್ ಆಗುವ ಮೊದಲು ಚಾರ್ಜ್ ಮಾಡುವುದು.

ಏರ್‌ಪ್ಲೇನ್ ಮೋಡ್‌ನಲ್ಲಿ ಚಾರ್ಜ್:
ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಟ್ಟರೆ ಕೆಲವೊಮ್ಮೆ ಚಾರ್ಜಿಂಗ್ ವೇಗ ಸ್ವಲ್ಪ ಹೆಚ್ಚಾಗಬಹುದು. ಆದರೆ ವ್ಯತ್ಯಾಸ ಬಹಳ ಹೆಚ್ಚಿನದ್ದೇನಿಲ್ಲ.

ವೈ-ಫೈ ಮತ್ತು ಬ್ಲೂಟೂತ್ ಪರಿಣಾಮ:
ವೈ-ಫೈ ಅಥವಾ ಬ್ಲೂಟೂತ್ ಆನ್ ಇರುವುದರಿಂದ ಬ್ಯಾಟರಿ ಚಾರ್ಜಿಂಗ್ ನಿಧಾನಗೊಳ್ಳಬಹುದು, ಆದರೆ ಇದರಿಂದ ಹಾನಿ ಉಂಟಾಗುವುದಿಲ್ಲ. ನೆಟ್‌ವರ್ಕ್ ಸಂಪರ್ಕ ಹೆಚ್ಚಿದಾಗ ಬ್ಯಾಟರಿ ವೇಗವಾಗಿ ಖಾಲಿಯಾಗಬಹುದು.

ಕಂಪ್ಯೂಟರ್/ಲ್ಯಾಪ್‌ಟಾಪ್ ಮೂಲಕ ಚಾರ್ಜಿಂಗ್:
ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾನಿಯಾಗುವುದಿಲ್ಲ. ನಿಧಾನ ಚಾರ್ಜ್ ಆಗಬಹುದು, ಆದರೆ ಪರಿಣಾಮಕಾರಿಯಲ್ಲ.

ಫೋನ್ ಆಫ್ ಮಾಡುವುದು:
ಸ್ವಲ್ಪ ಕಾಲ ಫೋನ್ ಆಫ್ ಮಾಡುವುದರಿಂದ ಬ್ಯಾಟರಿ ಜೀವನಾವಧಿಗೆ ಯಾವುದೇ ಲಾಭ ಇಲ್ಲ.

ಇದನ್ನೂ ಓದಿ