Tuesday, September 23, 2025

Yoga | ಸೂರ್ಯನಮಸ್ಕಾರ ಯಾವಾಗ ಮಾಡ್ಬೇಕು? ಬೆಳಗ್ಗೆನಾ? ಸಂಜೆನಾ?

ಭಾರತೀಯ ಪುರಾತನ ಪದ್ಧತಿಗಳಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲಿ ಸೂರ್ಯನಮಸ್ಕಾರ ಒಂದು ಪ್ರಮುಖ ಯೋಗಾಭ್ಯಾಸ. ದೇಹದ ಚಲನೆ ಮತ್ತು ಉಸಿರಾಟವನ್ನು ಸಮನ್ವಯಗೊಳಿಸುವ ಈ ಯೋಗ ಭಂಗಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾರ ಲಾಭಗಳನ್ನು ನೀಡುತ್ತದೆ.

ಇಂದಿನ ದಿನಗಳಲ್ಲಿ ಸೂರ್ಯನಮಸ್ಕಾರವನ್ನು ವಿಶ್ವದಾದ್ಯಂತ ಜನರು ಮಾಡುತ್ತಾರೆ . ಆದರೆ, ಇದನ್ನು ಯಾವಾಗ ಮಾಡಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಕಂಡುಬರುತ್ತದೆ. ಯೋಗಪಟುಗಳ ಅಭಿಪ್ರಾಯದಲ್ಲಿ, ಮುಂಜಾನೆ ಸಮಯವೇ ಸೂರ್ಯನಮಸ್ಕಾರಕ್ಕೆ ಅತ್ಯುತ್ತಮ.

ಬೆಳಗ್ಗೆ ಸೂರ್ಯನಮಸ್ಕಾರ ಮಾಡುವುದರಿಂದ ಸಿಗುವ ಲಾಭಗಳು

ವಿಟಮಿನ್ ಡಿ ದೊರಕುವುದು
ಬೆಳಗಿನ ತಾಜಾ ಸೂರ್ಯಕಿರಣಗಳು ದೇಹದ ಮೇಲೆ ಬೀಳುವುದರಿಂದ ಶರೀರಕ್ಕೆ ವಿಟಮಿನ್ ಡಿ ದೊರಕುತ್ತದೆ. ಇದು ಎಲುಬುಗಳನ್ನು ಬಲಪಡಿಸಿ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮನಸ್ಸಿಗೆ ಪ್ರಫುಲ್ಲತೆ
ಬೆಳಗ್ಗೆ ಸೂರ್ಯನಮಸ್ಕಾರ ಮಾಡುವುದರಿಂದ ಮನಸ್ಸು ಹಗುರವಾಗಿ, ದಿನವಿಡೀ ಪ್ರೇರಣೆಯಿಂದ ಕೂಡಿರುತ್ತದೆ. ಇದು ಒತ್ತಡವನ್ನು ಕಡಿಮೆಮಾಡಿ, ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಶ್ವಾಸಕೋಶ ಶುದ್ಧೀಕರಣ
ಮುಂಜಾನೆ ತಾಜಾ ಗಾಳಿ ಮತ್ತು ತಂಪಾದ ವಾತಾವರಣ ಶ್ವಾಸಕೋಶವನ್ನು ತಾಜಾತನದಿಂದ ತುಂಬುತ್ತದೆ. ಉಸಿರಾಟದ ಪ್ರಕ್ರಿಯೆ ಸುಲಭವಾಗಿ ನಡೆಯಲು ಸಹಕಾರಿ ಆಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ
ಖಾಲಿ ಹೊಟ್ಟೆಯಲ್ಲಿ ಸೂರ್ಯನಮಸ್ಕಾರ ಮಾಡಿದರೆ ಜೀರ್ಣಕ್ರಿಯೆ ಸುಗಮವಾಗಿ ನಡೆಯುತ್ತದೆ. ದೇಹದಲ್ಲಿ ಶಕ್ತಿ ತುಂಬಿ ದೈನಂದಿನ ಚಟುವಟಿಕೆಗಳನ್ನು ಚುರುಕುವಾಗಿ ನಡೆಸಲು ಸಹಾಯಕವಾಗುತ್ತದೆ.

ತೂಕ ನಿಯಂತ್ರಣ
ಸೂರ್ಯನಮಸ್ಕಾರ ದೇಹದ ಕ್ಯಾಲೊರಿಗಳನ್ನು ಕರಗಿಸಿ, ತೂಕವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ನಿಯಮಿತ ಅಭ್ಯಾಸ ತೂಕ ಇಳಿಸಲು ಬಯಸುವವರಿಗೆ ಸಹ ಸಹಾಯಕ.

ಇದನ್ನೂ ಓದಿ