January18, 2026
Sunday, January 18, 2026
spot_img

ಜಾತಿ ಗಣತಿ: ಎರಡು ದಿನದಲ್ಲಿ 71 ಸಾವಿರ ಮಂದಿ ಸಮೀಕ್ಷೆ, ಮತ್ತದೇ ಸರ್ವರ್‌ ಸಮಸ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ವರ್‌ ಸಮಸ್ಯೆ, ಸಕಾಲದಲ್ಲಿ ಒಟಿಪಿ ಪಡೆಯುವಲ್ಲಿನ ಅಡಚಣೆ, ತಾಂತ್ರಿಕ ದೋಷ ಸೇರಿದಂತೆ ಇತರೆ ಸಮಸ್ಯೆ, ಸವಾಲುಗಳ ಮುಂದುವರಿಕೆ ನಡುವೆ ಎರಡನೇ ದಿನವಾದ ಮಂಗಳವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಡಿ 18,487 ಕುಟುಂಬಗಳ 71,004 ಮಂದಿಯ ದತ್ತಾಂಶ ಸಂಗ್ರಹ ಸಂಗ್ರಹಿಸಲಾಗಿದೆ.

ಸಮೀಕ್ಷೆ ಆರಂಭವಾದ ಮೊದಲ ದಿನ ಸೋಮವಾರ ಕಾಣಿಸಿಕೊಂಡ ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆ ಮಂಗಳವಾರವೂ ಸಮೀಕ್ಷಕರನ್ನು ಕಾಡಿತು. ಕುಟುಂಬಗಳನ್ನು ಭೇಟಿಯಾಗಿ ದತ್ತಾಂಶ ಸಂಗ್ರಹ ಪ್ರಕ್ರಿಯೆ ಆರಂಭಿಸುವ ಮುನ್ನ ಒಟಿಪಿ ಪಡೆಯುವಲ್ಲಿಯೂ ವಿಳಂಬವಾಗಿದ್ದರಿಂದ ಸಮೀಕ್ಷಕರು ಪರದಾಡುವಂತಾಯಿತು. ಕುಟುಂಬ ಸದಸ್ಯರು ಸಹ ಮಾಹಿತಿ ಹಂಚಿಕೊಳ್ಳಲು ಸಾಕಷ್ಟು ಸಮಯ ಕಾಯುವಂತಾಗಿತ್ತು.

ಮಂಗಳವಾರ ಸಂಜೆ 6 ಗಂಟೆವರೆಗೆ ಮಾಹಿತಿಯನ್ವಯ 18,487 ಕುಟುಂಬಗಳನ್ನು ಸಂಪರ್ಕಿಸಿ 71,004 ಮಂದಿಯ ದತ್ತಾಂಶ ಸಂಗ್ರಹಿಸಲಾಗಿತ್ತು. ಮೊದಲ ಎರಡು ದಿನದಲ್ಲಿ ಹಾವೇರಿಯಲ್ಲಿ ಅತಿ ಹೆಚ್ಚು ಸಮೀಕ್ಷೆ ನಡೆದಿದ್ದು, ಮಂಗಳವಾರದ ಅಂತ್ಯಕ್ಕೆ 2783 ಕುಟುಂಬಗಳ 10,820 ಮಂದಿಯ ದತ್ತಾಂಶ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಬಾಗಲಕೋಟೆಯಲ್ಲಿ1840, ಬೆಳಗಾವಿ ಹಾಗೂ ಗದಗ ಜಿಲ್ಲೆಯಲ್ಲಿ 1826 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ತುಮಕೂರಿನಲ್ಲಿ ಅತಿ ಕಡಿಮೆ ಎಂದರೆ ಕೇವಲ 7 ಮನೆಗಳ ಸಮೀಕ್ಷೆಯಾಗಿದ್ದು, 21 ಮಂದಿಯ ದತ್ತಾಂಶ ಸಂಗ್ರಹಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 77, ಕೋಲಾರದಲ್ಲಿ 60, ಉಡುಪಿಯಲ್ಲಿ 55, ಬೆಂಗಳೂರು ನಗರ ಜಿಲ್ಲೆಯಲ್ಲಿ 53, ಚಿಕ್ಕಬಳ್ಳಾಪುರದಲ್ಲಿ 36 ಮನೆಗಳ ಸಮೀಕ್ಷೆಯಷ್ಟೇ ಪೂರ್ಣಗೊಂಡಿದೆ.

Must Read

error: Content is protected !!